ಯಾದಗಿರಿ ಮೇ 20: 21 ರಂದು ನನ್ನ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿಲ್ಲ, ನಾನು ಸ್ಥಳೀಯವಾಗಿ ಲಭ್ಯವಿರುವುದಿಲ್ಲ, ಹಾಗೆ ದೇಶದ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಇಂಧನ ಉಳಿತಾಯದ ಬಗ್ಗೆ ಸದಾ ಕಾಳಜಿ ವಹಿಸುತ್ತಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ದೇಶದ ಜನತೆಗೆ ಅನಗತ್ಯ ಇಂಧನ ಬಳಕೆಯನ್ನು ತಪ್ಪಿಸಿ, ಸರಳ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.ಪ್ರಧಾನಮಂತ್ರಿಗಳ ಈ ಸಂದೇಶದಿಂದ ಪ್ರೇರಿತನಾಗಿ, ಈ ವರ್ಷದ ನನ್ನ ಜನ್ಮದಿನವನ್ನು ಯಾವುದೇ ವೈಭವ, ಮೆರವಣಿಗೆ ಅಥವಾ ವಿಶೇಷ ಕಾರ್ಯಕ್ರಮಗಳಿಲ್ಲದೆ ಸರಳವಾಗಿ ಆಚರಿಸಲು ನಾನು ನಿರ್ಧರಿಸಿದ್ದೇನೆ.ಆದ್ದರಿಂದ ನನ್ನ ಎಲ್ಲಾ ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ದೂರ ದೂರದಿಂದ ವಾಹನಗಳಲ್ಲಿ ಪ್ರಯಾಣ ಮಾಡಿ ಭೇಟಿ ನೀಡಬಾರದು ಎಂದು ವಿನಂತಿಸುತ್ತೇನೆ.ಅನಗತ್ಯ ವಾಹನ ಬಳಕೆಯಿಂದ ಇಂಧನ ವ್ಯರ್ಥವಾಗುವುದನ್ನು ತಪ್ಪಿಸಿ, ದೇಶದ ಹಿತವನ್ನು ಗಮನದಲ್ಲಿಟ್ಟುಕೊಳ್ಳೋಣ. ಹಾಗೆಯೇ ಜನ್ಮದಿನದ ಅಂಗವಾಗಿ ಉಡುಗೊರೆಗಳು, ಹಾರಶಾಲು ಅಥವಾ ದುಬಾರಿ ಕಾಣಿಕೆಗಳನ್ನು ತರುವ ಅಗತ್ಯವಿಲ್ಲ. ಅದಕ್ಕಾಗಿ ಖರ್ಚು ಮಾಡುವ ಹಣವನ್ನು ಕುಟುಂಬದ ಒಳಿತಿಗೆ, ಶಿಕ್ಷಣಕ್ಕೆ, ಬಡವರ ಸಹಾಯಕ್ಕೆ ಅಥವಾ ಸಮಾಜಮುಖಿ ಕಾರ್ಯಗಳಿಗೆ ಬಳಸಿದರೆ ಅದು ನನಗೆ ಅತ್ಯುತ್ತಮ ಉಡುಗೊರೆಯಾಗುತ್ತದೆ.
ದೇಶದ ಪ್ರಗತಿಗೆ ಪ್ರತಿಯೊಬ್ಬ ನಾಗರಿಕನ ಸಣ್ಣ ಕೊಡುಗೆಯೂ ಮಹತ್ವದ್ದಾಗಿದೆ.ಇಂಧನ ಉಳಿಸಿ, ದೇಶ ರಕ್ಷಿಸಿ, ಅನಗತ್ಯ ಬಳಕೆ ತಡೆದು ಜವಾಬ್ದಾರಿಯುತ ನಾಗರಿಕರಾಗೋಣ ಪ್ರಧಾನಿ ಮೋದಿ ಕರೆಗೆ ಕೈಜೋಡಿಸೋಣ ಪ್ರತಿಯೊಬ್ಬರೂ ಸರಳ ಜೀವನ ಅಳವಡಿಸಿಕೊಳ್ಳೋಣ ಎಂದು ಅವರು ತಿಳಿಸಿದ್ದಾರೆ
ಪ್ರಧಾನಿ ಮೋದಿ ಕರೆಗೆ ಓಗೊಟ್ಟು – ಇಂಧನ ಉಳಿತಾಯ ಹಾಗೂ ಪರಿಸರ ಸಂರಕ್ಷಣೆ, ವೈಭವದ ಜನ್ಮ ದಿನಾಚರಣೆಗೆ ಬ್ರೇಕ್: ಶ್ರೀಧರ ಸಾಹುಕಾರ

