Wed. May 20th, 2026

ಅಂಗ್ಲ ಬ್ಯಾನರ್ ಗಳ ತೆರವಿಗೆ ಕ್ರಮ ಕೈಗೊಳ್ಳದಿದ್ದರೆ ಕರವೇ ಕಾರ್ಯಕರ್ತರೇ ತೆರವು ಮಾಡಲಿದ್ದಾರೆ: ಹತ್ತಿಮನಿ ಎಚ್ಚರಿಕೆ

ಅಂಗ್ಲ ಬ್ಯಾನರ್ ಗಳ ತೆರವಿಗೆ ಕ್ರಮ ಕೈಗೊಳ್ಳದಿದ್ದರೆ ಕರವೇ ಕಾರ್ಯಕರ್ತರೇ ತೆರವು ಮಾಡಲಿದ್ದಾರೆ: ಹತ್ತಿಮನಿ ಎಚ್ಚರಿಕೆ

ಯಾದಗಿರಿ ಮೇ ೨೦:  ನಗರಸಭೆಯ ಬಾಡಿಗೆ ಜಾಹೀರಾತು ಹೋರ್ಡಿಂಗ್‌ಗಳ ಬಾಡಿಗೆ ಪಡೆದು ಆಂಗ್ಲ ಭಾಷೆಯ ಜಾಹೀರಾತು ಪ್ರಕಟಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ನಗರಾಧ್ಯಕ್ಷ ಅಂಬ್ರೇಷ್ ಹತ್ತಿಮನಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ 2023 ರಲ್ಲಿಯೇ ನಿಯಮಾವಳಿ ರೂಪಿಸಿ ಯಾವುದೇ ಫಲಕ ಜಾಹೀರಾತು, ಅಂಗಡಿ ಮುಂಗಟ್ಟುಗಳಲ್ಲಿನ ನಾಮಫಲಕಗಳು 60:40 ಅನುಪಾತದಲ್ಲಿ ಕನ್ನಡ : ಆಂಗ್ಲ ಇಲ್ಲವೇ ಇತರ ಭಾಷೆಗಳಲ್ಲಿ ಇರಬೇಕೆಂಬ ಆದೇಶವೇ ಹೊರಡಿಸಿದೆ.
ಆದರೆ ಯಾದಗಿರಿ ನಗರಸಭೆ ಒಡೆತನದಲ್ಲಿರುವ ದೊಡ್ಡ ದೊಡ್ಡ ಬ್ಯಾನರ್ ಗಳ ಕಟೌಟ್ ಗಳಲ್ಲಿ ಭಿತ್ತಿಚಿತ್ರಗಳನ್ನು ಅಳವಡಿಸುವವರು ಸರ್ಕಾರದ ಕನ್ನಡ ಪರ ಆದೇಶವನ್ನು ಪಾಲನೆ ಮಾಡದೇ ಕನ್ನಡಕ್ಕೆ ಅವಮಾನ ಮಾಡುತ್ತಿರುವ ಘಟನೆಗಳು ರಾಜಾರೋಷವಾಗಿ ನಡೆಯುತ್ತಿವೆ.
ಅದರಲ್ಲೂ ವಿಶೇಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನಿತರ ಸಂಸ್ಥೆಗಳು ತಮ್ಮ ಜಾಹೀರಾತು ಫಲಕಗಳಲ್ಲಿ ಸಂಪೂರ್ಣ ಆಂಗ್ಲ ಭಾಷೆ ಬಳಕೆ ಮಾಡಿ ಕನ್ನಡಕ್ಕೆ ಅಪಮಾನ ಮಾಡುವ ಸಂಗತಿಗಳು ಇತ್ತಿಚೆಗೆ ರಾಜಾರೋಷವಾಗಿ ನಡೆಯುತ್ತಲಿವೆ.
ಕೂಡಲೇ ಇಂತಹ ಕನ್ನಡಕ್ಕೆ ಅಪಮಾನ ಮಾಡುವ ಘಟನೆಗಳಿಗೆ ಕಡಿವಾಣ ಹಾಕಲು ನಗರಸಭೆ ಮುಂದಾಗಬೇಕು. ನಗರಸಭೆ ಹಾಗೂ ಶಿಕ್ಷಣ ಇಲಾಖೆಗಳು ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಭವಿಷ್ಯದಲ್ಲಿ ಇಂತಹ ಕಾನೂನು ಉಲ್ಲಂಘನೆ ಕೃತ್ಯ ಎಸಗದಂತೆ ಕ್ರಮ ಕೈಗೊಳ್ಳಬೇಕು.
ಅದರಲ್ಲೂ ವಿಶೇಷವಾಗಿ ಶಿಕ್ಷಣ ಇಲಾಖೆಗಳು ಇಂತಹ ಕನ್ನಡ ಅಪಮಾನ ಕೃತ್ಯ ಎಸಗಿದ್ದು ಸಾಕ್ಷಿ ಸಮೇತ ಸಿಕ್ಕಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಮಾಡುವ ಹಂತಕ್ಕೂ ಹೋಗಿ ಪಾಠ ಕಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ತಕ್ಷಣ 2-3 ದಿನದಲ್ಲಿ ನಗರಸಭೆ ಹಾಗೂ ಶಿಕ್ಷಣ ಇಲಾಖೆಯವರು ಎಚ್ಚೆತ್ತು ಕ್ರಮ ಕೈಗೊಳ್ಳಬೆಕು ಇಲ್ಲವಾದಲ್ಲಿ ಕರವೇ ಕಾರ್ಯಕರ್ತರು ಇಂತಹ ಕನ್ನಡ ದ್ರೋಹಿ ಬ್ಯಾನರ್ ಗಳನ್ನು ಹರಿದು ಹಾಕಲು ಮುಂದಾದಲ್ಲಿ ಇಂತಹ ಘಟನೆಗಳಿಗೆ ಸಂಬAಧಿಸಿದ ಅಧಿಕಾರಿಗಳೇ ಜವಬ್ದಾರರಾಗಲಿದ್ದಾರೆ ಎಂದು ರವಿಕುಮಾರ ಜಮ್ಮಾರ, ಜನಾರ್ಧನ ಚಾಮನಳ್ಳಿ, ಕಾಶಿನಾಥ ನಾನೇಕ, ರಮೇಶ ನಾಯಕ, ಮರೆಪ್ಪ ಕಡ್ಡಿ, ಬಸ್ಸು ಜಗನ್ನಾಥ ಎಚ್ಚರಿಸಿದ್ದಾರೆ.

Related Post

Leave a Reply

Your email address will not be published. Required fields are marked *

error: Content is protected !!