Wed. May 20th, 2026

ಅಕ್ರಮ ಬೀಜ ರಸಗೊಬ್ಬರ ಮಾರಾಟ ತಡೆಯುವಂತೆ:ಮಲ್ಲಣ್ಣ ಒತ್ತಾಯ

ಅಕ್ರಮ ಬೀಜ ರಸಗೊಬ್ಬರ ಮಾರಾಟ ತಡೆಯುವಂತೆ:ಮಲ್ಲಣ್ಣ ಒತ್ತಾಯ

ವಡಗೇರಾ ಮೇ ೨೦: ತಾಲೂಕಿನಲ್ಲಿ ನಕಲಿ ಬೀಜ ರಸ ಗೊಬ್ಬರ ದಲ್ಲಾಳಿಗಳು ‌ರೈತರಿಗೆ ಕಳಪೆ ಬೀಜ ರಸ ಗೊಬ್ಬರ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು ಇದು ರೈತರಿಗೆ ಮಾಡುತ್ತಿರುವ ಮಾಹಾ ಮೋಸವಾಗಿದೆ ಇದಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವಡಗೇರಾ ತಾಲೂಕ ಅಧ್ಯಕ್ಷ ಮಲ್ಲಣ್ಣ ನೀಲಳ್ಳಿ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ನಕಲಿ ಬೀಜ ರಸ ಗೊಬ್ಬರ ಮಾರಾಟಗಾರರು ರೈತರಿಗೆ ಹತ್ತಿ ಬೀಜ ಹಾಗೂ ಕಳಪೆ ರಸಗೊಬ್ಬರ ವಿತರಣೆ ಮಾಡುತ್ತಿದ್ದು ಅದನ್ನು ತಡೆಯುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಸುಮಾರ ವರ್ಷಗಳಿಂದ ಆಂಧ್ರ ತೆಲಂಗಾಣ ರಾಜ್ಯದ ಅಂಗಡಿಯ ಮಾಲೀಕರು ಕಳಪೆ ಬೀಜಗಳನ್ನು ಕರ್ನಾಟಕ ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದು ಇದು ರಾಜ್ಯದ ರೈತರಿಗೆ ಮೋಸ ಮಾಡುತ್ತಿದ್ದಾರೆ.ಈ ಹಿಂದೆ ಕರ್ನಾಟಕ ರಾಜ್ಯದ ರೈತರು ಕಳಪೆ ಹತ್ತಿ ಬೀಜಗಳನ್ನು ಬಿತ್ತನೆ ಮಾಡಿ ಸಂಕಷ್ಟಕ್ಕೀಡಾಗಿದ್ದಾರೆ ಇಷ್ಟೆಲ್ಲಾ ಸಮಸ್ಯೆಗಳ ಆದರೂ ಕೂಡಾ ಕರ್ನಾಟಕ ರಾಜ್ಯದ ಕೃಷಿ ಇಲಾಖೆಯ ಅಧಿಕಾರಿಗಳು ತೀವ್ರ ನಿರ್ಲಕ್ಷ ವಹಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಕಳಪೆ ಬೀಜ ಗೊಬ್ಬರಗಳನ್ನು ಸರಬರಾಜು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಮಲ್ಲಣ್ಣ ನೀಲಳ್ಳಿ ಒತ್ತಾಯಿಸಿದ್ದಾರೆ

Related Post

Leave a Reply

Your email address will not be published. Required fields are marked *

error: Content is protected !!