Wed. May 20th, 2026

ಜಿಲ್ಲಾ ಕೋಲಿ ಮತ್ತು ಕಬ್ಬಲಿಗ ಸಮಾಜದಿಂದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಿಗೆ ಸನ್ಮಾನ

ಜಿಲ್ಲಾ ಕೋಲಿ ಮತ್ತು ಕಬ್ಬಲಿಗ ಸಮಾಜದಿಂದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಿಗೆ  ಸನ್ಮಾನ

ಪತ್ರಕರ್ತರು ಜನರ‌ ವಿಶ್ವಾಸ ಉಳಿಸಿಕೊಳ್ಳುವುದು ಅಗತ್ಯವಿದೆ; ಸಂಕೀನ್

ಯಾದಗಿರಿ ಮೇ ೨೦:  ಜಿಲ್ಲಾ ಕೋಲಿ‌ ಮತ್ತು ಕಬ್ಬಲಿಗ ಸಮಾಜದಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಸತತ 2ನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರಿಗೆ ಸನ್ಮಾನಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ‌ ಗೋಸಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ‌ ಸ್ವೀಕರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರ ಮೇಲೆ ಜವಾಬ್ದಾರಿ ಸಾಕಷ್ಟು ಇದೆ.‌ ಹೀಗಾಗಿಯೇ ವಿಶ್ವಾಸ ನಮ್ಮ‌ ಮೇಲೆ ಇರಿಸಿದ್ದಾರೆ. ಅವರ ನಂಬಿ ಉಳಿಸಿಕೊಂಡು ಕಾರ್ಯನಿರ್ವಹಿಸಲಾಗುವುದು ಎಂದರು.

ಇತ್ತೀನ ದಿನಗಳಲ್ಲಿ ಮಾಧ್ಯಮ‌‌ ಕ್ಷೇತ್ರದ ಮೇಲೆ‌ ಜನರು ನಂಬಿಕೆ ಕಳದುಕೊಳ್ಳುವ ಸ್ಥಿತಿಗೆ ಬಂದಿದೆ.‌ ಹೀಗಾಗಿಯೇ ಎಚ್ಚರಿಕೆಯಿಂದ ಕೆಲಸ ಮಾಡುವುದು ಅಗತ್ಯವಿದೆ. ಧ್ವನಿಯಿಲ್ಲದವರ ಧ್ವನಿಯಾಗುವುದು ಪತ್ರಕರ್ತರ ಜವಾಬ್ದಾರಿ ಆಗಿದೆ ಎಂದರು.

ಕೋಲಿ ಮತ್ತು ಕಬ್ಬಲಿಗ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ‌ ಗೋಸಿ ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು ಇದೆ. ಈ ರಂಗದಿಂದಲೇ ಎಲ್ಲ ರಂಗ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಕಳೆದ ಒಂದು ದಶಕಕ್ಕೂ ಅಧಿಕವಾಗಿ ಜಿಲ್ಲೆಯ‌‌ ಮಾಧ್ಯಮ‌ ಕ್ಷೇತ್ರದಲ್ಲಿ ಮಲ್ಲಪ್ಪ ಸಂಕೀನ್‌ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಲ್ಲಿ ಖಡಕ್ ಪತ್ರಕರ್ತ ಎಂದೇ‌ ಖ್ಯಾತಿ ಪಡೆದುಕೊಂಡಿದ್ದಾರೆ ಎಂದರು.

ಭೀಮರಡ್ಡಿ, ನಿಂಗಪ್ಪ ಜಾಲಗಾರ, ಶರಣು ಪಟೇದಾರ ಆಶನಾಳ, ಮಲ್ಲು ಪೂಜಾರಿ, ಬಸವರಾಜ ಕೊಲ್ಲೂರು, ಮುದುಕಪ್ಪ ಚಾಮನಾಳ, ದೇವೇಂದ್ರಪ್ಪ ಪಸ್ಪುಲ್, ಮಹೇಶ್ ಕುಮಾರ್ ಬಾಡಿಹಾಳ, ಅಯ್ಯಾ ನಾಯ್ಕೋಡಿ ಸೇರಿದಂತೆ ಇನ್ನಿತರರಿದ್ದರು.

Related Post

Leave a Reply

Your email address will not be published. Required fields are marked *

error: Content is protected !!