ಯಾದಗಿರಿ ಜ ೨೬: ನಗರದ ಸ್ಟೇಷನ್ ರಸ್ತೆಯ ಲಿಂಗೇರಿ ಕಾಂಪ್ಲೆಕ್ಸ್ ನ ಕನ್ಸ್ ಲ್ಟಿಂಗ್ ಇಂಜೀನೀಯರ್ ಕಚೇರಿಯಲ್ಲಿ 77 ನೇ ಗಣರಾಜ್ಯೋತ್ಸವ ಕನ್ಸ್ ಲ್ಟಿಂಗ್ ಇಂಜೀನಿಯರ್ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಭೀಮಣ್ಣ ಗೌಡ ಕ್ಯಾತ್ನಾಳ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ,
1947 ಆಗಸ್ಟ್ 15 ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರು, ನಮ್ಮ ಕಲ್ಯಾಣ ಕರ್ನಾಟಕ ಭಾಗವು ಹೈದರಾಬಾದ್ ನಿಜಾಮನ ವಶದಲ್ಲಿ ಇದ್ದವು.
ದೇಶ ಭಕ್ತ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ನೇತೃತ್ವದಲ್ಲಿ ಅನೇಕ ದೇಶ ಭಕ್ತರು ಹೋರಾಟ ನಡೆಸಿ ಸಂಪೂರ್ಣ ಭಾರತ ಸ್ವಾತಂತ್ರ್ಯವನ್ನು ತಂದು ಕೊಟ್ಟರು.
ಭಾರತ ಸಂವಿಧಾನವು ಭಾರತದ ಸರ್ವೋಚ್ಚ ಕಾನೂನಾಗಿದೆ ಡಾ. ಆರ್, ಅಂಬೇಡ್ಕರ್ ಅವರ ನೇತೃತ್ವದ ಸಮೀತಿಯ ತಂಡವು ಭಾರತೀಯ ಸಂವಿಧಾನ ಕರಡನ್ನು ಸಲ್ಲಿಸಿತು ಇದನ್ನು ನವೆಂಬರ್ 26 1949 ರಂದು ಅಂಗೀಕರಿಸಲಾಯಿತು.
ಮತ್ತು ಅಧಿಕೃತವಾಗಿ ಜನೆವರಿ 26 1950 ರಂದು ಜಾರಿಗೆ ಬಂದಿತು. ಜನೆವರಿ 26 ರಂದು ಭಾರತೀಯ ಸಂವಿಧಾನವೂ ಜಾರಿಗೆ ಬಂದು, ಹಾಗಾಗಿ ಈ ಮಹತ್ವದ ವಿಶೇಷ ದಿನದ ನೆನಪಿಗಾಗಿ ನಾವು ಗಣರಾಜ್ಯೋತ್ಸವ ಆಚರಣೆಯನ್ನು ಮಾಡುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಹೇಮಂತ್ ಕುಮಾರ್, ಇರ್ಫಾನ್ ಬಾದಲ್, ಸೋಮಶೇಖರ್ ಗಣಪೂರ್, ಡಾ. ಶಿವಪುತ್ರ ರೆಡ್ಡಿ, ವೆಂಕಟರೆಡ್ಡಿ ತಂಗಡಗಿ, ಮುಕುಂದ್ ಆಚಾರ್ಯ, ಸಿದ್ದು ತಿಪ್ಪಾರೆಡ್ಡಿ, ಲಕ್ಷ್ಮೀ ಪುತ್ರ ಪಾಟೀಲ್, ಪಿ. ಆನಂದ್, ಬಸವರಾಜ್ ಕಲ್ಕೆರಿ, ಬನ್ನಪ್ಪ, ಶಿವಪುತ್ರ, ಇಕ್ಲಾಸ್, ವಾರಿಸ್,
ಲುಕ್ ಮನ್, ಫಾಸ್ಸಿಯುದ್ದಿನ್, ಭೀಮರಾಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಕನ್ಸಲ್ಟಿಂಗ್ ಸಿವಿಲ್ ಇಂಜೀನಿಯರ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

