Wed. Feb 11th, 2026

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ಛಾವಣಿಯಿಂದ ಜಿಗಿದ ಮಹಿಳೆ ವಿಡಿಯೋ ವೈರಲ್

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ಛಾವಣಿಯಿಂದ ಜಿಗಿದ ಮಹಿಳೆ ವಿಡಿಯೋ ವೈರಲ್

ಅಲಿಗಢ (ಉ.ಪ್ರ.): ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ತನ್ನ ಎರಡು ಅಂತಸ್ತಿನ ಮನೆಯ ಛಾವಣಿಯಿಂದ ಜಿಗಿದ ಹೃದಯ ವಿದ್ರಾವಕ ಘಟನೆ ಅಲಿಗಢದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಕೋಪಕ್ಕೆ ಕಾರಣವಾಗಿದೆ.

ಆರು ವರ್ಷಗಳ ಹಿಂದೆ ಸೋನು ಎಂಬಾತನೊಂದಿಗೆ ವಿವಾಹವಾದ ಅರ್ಚನಾ ಎಂಬ ಗೃಹಿಣಿಗೆ ಇಬ್ಬರು ಮಕ್ಕಳು ಇದ್ದಾರೆ. ಮದುವೆಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚ ಮಾಡಿದರೂ, ವರದಕ್ಷಿಣೆ ಪೂರಕವಾಗಿಲ್ಲವೆಂದು ಅತ್ತೆ-ಮಾವಂದಿರು ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದರೆಂದು ಕುಟುಂಬದವರು ಆರೋಪಿಸಿದ್ದಾರೆ. ಹೆಚ್ಚುವರಿಯಾಗಿ ನಗದಿನಲ್ಲಿ ಐದು ಲಕ್ಷ ರೂ. ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್ ನೀಡುವಂತೆ ಆಗ್ರಹಿಸಿ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿತ್ತೆಂದು ತಿಳಿದುಬಂದಿದೆ.

ಅರ್ಚನಾ ಅವರ ಸಹೋದರ ಅಂಕಿತ್ ನೀಡಿರುವ ದೂರಿನಲ್ಲಿ, ಪತಿ ಸೋನು ಮಾತ್ರವಲ್ಲದೆ ಅವನ ಸಹೋದರ ಪ್ರಮೋದ್ ಕೂಡ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಈ ಬಗ್ಗೆ ಪತಿ ಮತ್ತು ಅತ್ತೆಗೆ ಹೇಳಿಕೊಂಡಾಗ ಬಾಯಿ ಮುಚ್ಚುವಂತೆ ಒತ್ತಡ ತಂದಿದ್ದರು. ಸೆಪ್ಟೆಂಬರ್ 1ರಂದು ಅತ್ತೆ-ಮಾವ ಮಕ್ಕಳೆನ್ನೇ ಕೊಲ್ಲುವುದಾಗಿ ಬೆದರಿಸಿದಾಗ, ಅರ್ಚನಾ ತಮ್ಮ ಜೀವ ತ್ಯಜಿಸುವುದಾಗಿ ಹೇಳಿದ್ದಳು. ಆಗ ಪತಿ ಹಾಗೂ ಕುಟುಂಬಸ್ಥರು ಅವಳನ್ನು ಪ್ರಚೋದನೆ ಮಾಡಿ ಛಾವಣಿಯಿಂದ ಜಿಗಿಯುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ವಿಡಿಯೊದಲ್ಲಿ ಪತಿ ತನ್ನ ಹೆಂಡತಿಯನ್ನು ಜಿಗಿಯಲು ಪದೇ ಪದೇ ಕೆಣಕುತ್ತಿರುವುದು ಕೇಳಿಬರುತ್ತದೆ. ಅರ್ಚನಾ ನೆಲಕ್ಕೆ ಬಿದ್ದ ತಕ್ಷಣ ಒಬ್ಬ ವ್ಯಕ್ತಿ ಆಕೆಯನ್ನು ಥಳಿಸಿದ ದೃಶ್ಯವೂ ದಾಖಲಾಗಿದೆ. ಈ ವೇಳೆಯಲ್ಲಿ ಆಕೆಯ ಮಗು “ಅಮ್ಮ.. ಅಮ್ಮ..” ಎಂದು ಅಳುತ್ತಿರುವ ದೃಶ್ಯ ಕಣ್ಣೀರಿಳಿಸುವಂತಿದೆ.

ಗೋಂಡಾ ಜಿಲ್ಲೆಯ ಡಕೌಲಿ ಗ್ರಾಮದಲ್ಲಿ ನಡೆದ ಈ ಘಟನೆ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿ ಮಹೇಶ್ ಕುಮಾರ್, “ಮಹಿಳೆ ಪತಿಯ ಪ್ರಚೋದನೆಯಿಂದ ಛಾವಣಿಯಿಂದ ಜಿಗಿದಿದ್ದಾರೆ. ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಹೇಳಿಕೆ ದಾಖಲಿಸಲಾಗಿದೆ ಮತ್ತು ಸಂಬಂಧಿತ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವೈರಲ್ ವಿಡಿಯೊ ಸಹ ತನಿಖೆಯ ಭಾಗವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವರದಕ್ಷಿಣೆ ಕಿರುಕುಳದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Related Post

Leave a Reply

Your email address will not be published. Required fields are marked *

error: Content is protected !!