Wed. Feb 11th, 2026

ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ನರಸಪ್ಪ ನಾಯಕ ಆಗ್ರಹ

ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ನರಸಪ್ಪ ನಾಯಕ ಆಗ್ರಹ

 

 ಮುಖ್ಯಾಂಶಗಳ 🔹 ಗವಿಸಿದ್ದಪ್ಪ ನಾಯಕರ ನಿಗ್ರಹಾತ್ಮಕ ಕೊಲೆ
🔹 ಆರೋಪಿಗಳ ವಿರುದ್ಧ ಗಲ್ಲು ಶಿಕ್ಷೆ ಒತ್ತಾಯ
🔹 ವಾಲ್ಮೀಕಿ ಮಹಾಸಭಾ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ
🔹 ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಗಂಭೀರ ಆರೋಪ
🔹 ಸಾದಿಕ್ ಹತ್ತಿರ ಮಚ್ಚು, ಗಾಂಜಾ ರೀಲ್ಸ್ ವೈರಲ್
🔹 10-15 ಜನ ದುಷ್ಕರ್ಮಿಗಳಿಂದ ದಾಳಿಯಾದ ಅನುಮಾನ
🔹 ಹಿಂದೂಗಳ ಮೇಲಿನ ದಾಳಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು
🔹 ಪರಿವಾರಕ್ಕೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗಕ್ಕೆ ಒತ್ತಾಯ

ಯಾದಗಿರಿ: ಕೊಪ್ಪಳ ನಗರದ ಯುವಕ ಗವಿಸಿದ್ದಪ್ಪ ನಾಯಕನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಘಟನೆಯ ಹಿಂದೆ ಪೊಲೀಸ್ ಕುಮ್ಮಕ್ಕು ಇದೆ ಎಂಬ ಶಂಕೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಯಾದಗಿರಿಯ ಜಿಲ್ಲಾಧಿಕಾರಿಗೆ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮನವಿ ಸಲ್ಲಿಸಿದೆ.

ವಾಲ್ಮೀಕಿ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ನರಸಪ್ಪ ನಾಯಕ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, “ಗವಿಸಿದ್ದಪ್ಪನ ಕೊಲೆ ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ಹಾಗೂ ತಕ್ಷಣವೇ ಅಂತ್ಯ ಸಂಸ್ಕಾರ ನಡೆಸಿದ ವಿಧಾನ ಅನುಮಾನ ಮೂಡಿಸುತ್ತಿದೆ. ಇಂಥ ಎತ್ತಿನ ಹಳ್ಳಿಯಲ್ಲಿ ಯುವಕನನ್ನು ನಡು ರಸ್ತೆ ಮಧ್ಯೆ ಬರ್ಬರವಾಗಿ ಹತ್ಯೆ ಮಾಡುವ ಧೈರ್ಯ ಆರೋಪಿ ಸಾದಿಕ್‌ಗೆ ಹೇಗೆ ಬಂತು ಎಂಬುದರ ಬಗ್ಗೆ ಪರಿಶೀಲನೆ ಅಗತ್ಯವಾಗಿದೆ,” ಎಂದು ಒತ್ತಾಯಿಸಿದರು.

ಸಾದಿಕ್‌ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಚ್ಚು ಹಿಡಿದು ರೀಲ್ಸ್‌ ಹಾಗೂ ಗಾಂಜಾ ಸೇವನೆಯ ದೃಶ್ಯಗಳು ವಿಕೃತ ಮನೋಭಾವವನ್ನು ತೋರುತ್ತವೆ. ಗವಿಸಿದ್ದಪ್ಪನನ್ನು ಕನಿಷ್ಠ 10–15 ಮಂದಿ ಸೇರಿ ಕೊಲೆ ಮಾಡಿರುವ ಶಂಕೆ ಇದೆ. ಇದನ್ನೆಲ್ಲಾ ಉಂಟುಮಾಡಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಬೇಡಿಕೆ ಇಟ್ಟಿದ್ದಾರೆ.

ಗವಿಸಿದ್ದಪ್ಪನ ಮನೆಯಿಂದ ಹೊರಗೆ ಬರಲು ಒತ್ತಾಯಿಸಿದ ಮುಸ್ಲಿಂ ಯುವತಿಯ ಪಾತ್ರದ ಕುರಿತು ಕೂಡ ತನಿಖೆ ನಡೆಯಬೇಕು. “ಜಾತ್ಯಾತೀತವಾಗಿ ನಿಂತು, ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರಿಯಲಿದೆ. ಈ ಹೋರಾಟ ಇಲ್ಲಿಯೇ ನಿಲ್ಲುವುದಿಲ್ಲ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು,” ಎಂದರು.

ಇದೇ ಸಂದರ್ಭದಲ್ಲೇ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ಹಾಗೂ ಪರಿಹಾರ ನೀಡುವಂತೆ ಸರಕಾರವನ್ನು ವಾಲ್ಮೀಕಿ ಮಹಾಸಭಾ ಆಗ್ರಹಿಸಿದೆ.

ಮನವಿ ಸಲ್ಲಿಸಿದವರು:
ದೇವೇಂದ್ರಪ್ಪ ನಾಯಕ, ಶರಣುನಾಯಕ ನಗಲಾಪುರ, ಮಂಜುನಾಥ ಅಬ್ಬೆತುಮಕೂರು, ವೀರಣ್ಣ ನಾಯಕ, ಹಣಮಂತ ಬಳಿಚಕ್ರ, ಮಸಲಿಂಗಪ್ಪ ಶೆಂಡಿಗಿ, ಗಂಗಾಧರ್, ಅಶೋಕ್ ಬಂಡಿಗೇರಾ, ನಿಂಗರಾಜ ಅಂಬಿಗಾ, ಮರಿಲಿಂಗಪ್ಪ ಸಿದ್ದಿ ಹಾಗೂ ಇತರರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *

error: Content is protected !!