ನ ೨೭: ತುಮಕೂರು ನಗರದ ಸದಾಶಿವನಗರದಲ್ಲಿ ಭಾನುವಾರ ರಾತ್ರಿ
ದಂಪತಿ ಮತ್ತು ಅವರ ಮೂವರು ಮಕ್ಕಳು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ . ಆತ್ಮಹತ್ಯೆ ಮಾಡಿಕೊಂಡ ಮೃತರನ್ನು ಗರೀಬ್ ಸಾಬ್, ಅವರ ಪತ್ನಿ ಸುಮಯ್ಯ, ಅವರ ಮಗಳು ಹಾಜಿರಾ ಮತ್ತು ಮಕ್ಕಳಾದ ಮೊಹಮ್ಮದ್ ಶಭಾನ್ ಮತ್ತು ಮೊಹಮ್ಮದ್ ಮುನೀರ್ ಎಂದು ಗುರುತಿಸಲಾಗಿದೆ. ಸಾಲ ಮತ್ತು ಚಿತ್ರಹಿಂಸೆ ಆರೋಪದ ಕಾರಣ ಅವರು ತೀವ್ರ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. “ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರು ಬರೆದಿರುವ ಆತ್ಮಹತ್ಯೆ ಪತ್ರ ಮತ್ತು ಸ್ವಯಂ ನಿರ್ಮಿತ ವಿಡಿಯೋದಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ” ಎಂದು ತುಮಕೂರು ಎಸ್ಪಿ ಅಶೋಕ್ ಕುಮಾರ್ ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಅದೇ ಕಟ್ಟಡದಲ್ಲಿ ವಾಸವಾಗಿರುವ ವ್ಯಕ್ತಿ ಮತ್ತು ಆತನ ಕುಟುಂಬದ ಸದಸ್ಯರು ತನ್ನ ಕುಟುಂಬಕ್ಕೆ ಹೇಗೆ ಚಿತ್ರಹಿಂಸೆ ನೀಡಿ ತೀವ್ರ ಹೆಜ್ಜೆ ಇಡಲು ಕಾರಣರಾದರು ಎಂಬುದನ್ನು ಮೃತರು ವಿಡಿಯೋದಲ್ಲಿ ವಿವರಿಸಿದ್ದಾರೆ. ವರದಿಗಳ ಪ್ರಕಾರ ಅವರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.