ಯಾದಗಿರಿ, ಸೆ. ೨೪:- ಯಾದಗಿರಿ ನಗರದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ 18.91 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿ ತುನ್ನೂರ ತಿಳಿಸಿದ್ದಾರೆ. ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ (ಕೆ.ಕೆ.ಆರ್.ಡಿ) ಮ್ಯಾಕ್ರೋ ಅನುದಾನದಡಿಯಲ್ಲಿ 3 ಪ್ರಮುಖ ಕಾಮಗಾರಿಗಳಿಗೆ 8 ಕೋಟಿ ರೂ., ಕೆಆರ್‌ಐಡಿಎಲ್‌ನ 4 ಕಾಮಗಾರಿಗಳಿಗೆ 5.10 ಕೋಟಿ ರೂ., ಹಾಗೂ 2023-24ನೇ ಸಾಲಿನ ಸಿಎಂಕ್ಯೂ ಯೋಜನೆಯಡಿಯಲ್ಲಿ 3 ಕಾಮಗಾರಿಗಳಿಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ರೈಲ್ವೆ ಹಾಗೂ ಭೀಮಾ ನದಿಯ ಬ್ರಿಡ್ಜ್ ರಸ್ತೆಯ ತಾತ್ಕಾಲಿಕ ದುರಸ್ತಿ ಕಾಮಗಾರಿಗಳಿಗೆ 2 ಕೋಟಿ ರೂ. ಅನುದಾನ ಸಹ ಧಾರವಾಹಿಕವಾಗಿ ಬಿಡುಗಡೆ ಮಾಡಲಾಗಿದೆ. ವಡಗೇರಾ ಭಾಗದಲ್ಲಿ ನಡೆಯುತ್ತಿರುವ 7 ಪ್ರಮುಖ ಕಾಮಗಾರಿಗಳಲ್ಲಿ 5 ಮುಗಿದಿದ್ದು, 2 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕರು ವಿವರಿಸಿದರು.
ಮುಡಾ ಹಗರಣ ಕುರಿತು ಮಾತನಾಡಿದ ಅವರು, ಹೈಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ. ಹೈಕಮಾಂಡ್ ಮತ್ತು ಸಂಪುಟದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ದಲಿತ ಮುಖ್ಯಮಂತ್ರಿ ಕುರಿತು ಮಾತನಾಡುವಾಗ, ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಹುದ್ದೆಗೆ ಆಸೆ ವ್ಯಕ್ತಪಡಿಸುವ ಕುರಿತು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದರು.
- 17ರ ಹರೆಯದಲ್ಲಿ 101 ಕೆಜಿ ಸಂಗ್ರಾಣಿ ಕಲ್ಲು ಎತ್ತಿ ಜಿಲ್ಲೆಯ ಕೀರ್ತಿ ತಂದ ಯುವ ಶಿಲ್ಪಿ
- ಆರು ತಿಂಗಳಿಂದ ಕಮಿಷನ್ ಬಾಕಿ — ನವೆಂಬರ್ ಪಡಿತರ ಎತ್ತುವಳಿ ನಿಲ್ಲಿಸಲು ವಿತರಕರ ಸಂಘದ ಎಚ್ಚರಿಕೆ
- ಯಾದಗಿರಿ ರೈತರಿಗೆ ಭಾರತ ಮಾಲಾ ಯೋಜನೆ ಬಾಧೆ — ಪರಿಹಾರ ಧನ ಹಾಗೂ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಡಾ. ಭೀಮಣ್ಣ ಮೇಟಿ ಆಗ್ರಹ
- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ; ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ನಾಮಪತ್ರ ಸಲ್ಲಿಕೆ
- ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ

