Mon. Dec 1st, 2025

ಯಾದಗಿರಿ:ಭೂ ಪರಿವರ್ತನೆ ರದ್ದು ಮಾಡಲು ಅಧಿಕಾರಿಗಳಿಂದ ಹಣಕ್ಕೆ ಡಿಮ್ಯಾಂಡ್..!

ಯಾದಗಿರಿ:ಭೂ ಪರಿವರ್ತನೆ ರದ್ದು ಮಾಡಲು ಅಧಿಕಾರಿಗಳಿಂದ ಹಣಕ್ಕೆ ಡಿಮ್ಯಾಂಡ್..!

ಯಾದಗಿರಿ ಜು.೨: ಭೂ ಪರಿವರ್ತನೆ ರದ್ದು ಮಾಡಲು ಅಧಿಕಾರಿಗಳಿಂದ ಹಣಕ್ಕೆ ಡಿಮ್ಯಾಂಡ್ ಜಿಲ್ಲಾಧಿಕಾರಿ ಕಚೇರಿ ಶಿರಸ್ತೆದಾರ ಶಬೀರ್ ಪಟೇಲ್ ಎಂಬಾತನಿಂದ ಹಣಕ್ಕೆ ಬೇಡಿಕೆ..!

ಭೂ ಪರಿವರ್ತನೆ ರದ್ದಿಗಾಗಿ ಒಂದು ಲಕ್ಷ ಹಣಕ್ಕೆ ಭೇಡಿಕೆ ಇಟ್ಟ ಶಿರಸ್ತೆದಾರ ಮುಂಗಡವಾಗಿ 50 ಸಾವಿರ ಹಣ ಪಡೆದಿರುವ ಆರೋಪ,ಬಾಕಿ 50 ಸಾವಿರ ಹಣ ನೀಡದಕ್ಕೆ ಭೂ ಪರಿವರ್ತನೆ ಮಾಡದೇ ಸತ್ತಾಯಿಸ್ತಿರೋ ಅಧಿಕಾರಿ

ಮನನೊಂದು ಜಿಲ್ಲಾಧಿಕಾರಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಅಧಿಕಾರಿ ಹಣದಾಸೆಗೆ ಬೇಸತ್ತು ಹಾರ್ಪಿಕ್ ಬಾಟಲ್ ಹಿಡಿದು ಡಿಸಿ ಕಚೇರಿಗೆ ಬಂದ ವ್ಯಕ್ತಿ

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ನಿವಾಸಿ ನಾಗರಾಜ್ ಚಿಂಚೋಳಿ ಎಂಬಾತನ ಬಳಿ ಹಣಕ್ಕೆ ಬೇಡಿಕೆ ತಾಯಿ ವನಮಾಲ ಹೆಸರಿನಲ್ಲಿರು ಜಮೀನು ಭೂ ಪರಿವರ್ತನೆ ಮಾಡುವಂತೆ ಅರ್ಜಿ ಸಲ್ಲಿಸಿದ್ದ ನಾಗರಾಜ್ ಹುಣಸಗಿ ಪಟ್ಟಣದ ಸರ್ವೆ ನಂಬರ್ 224/3 ರ 1 ಎಕರೆ 25 ಗುಂಟೆ ಜಮೀನು

ಈಗಾಗಲೇ ಭೂಮಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲಾಗಿದೆ ಭೂ ಪರಿವರ್ತನೆ ಆದ ಜಮೀನು ಮಾರಾಟ ಮಾಡಲು ಬಾರದ ಹಿನ್ನಲೆ

ಭೂ ಪರಿವರ್ತನೆ ಆದೇಶ ರದ್ದು ಪಡಿಸಲು ಅರ್ಜಿ ಸಲ್ಲಿಸಿದ ನಾಗರಾಜ್ ತಾಯಿ ಆದರೆ,ಭೂ ಪರಿವರ್ತನೆ ರದ್ದು ಮಾಡಲು ಕಂದಾಯ ಅಧಿಕಾರಿ ಹಾಗೂ ಸಿಬ್ಬಂದಿ ಹಣಕ್ಕೆ ಡಿಮ್ಯಾಂಡ್ ಶಿರಸ್ತೆದಾರ ಶಬೀರ್ ಪಟೇಲ್ ಹಾಗೂ ಶಿವಶರಣರೆಡ್ಡಿಯಿಂದ ಹಣಕ್ಕೆ ಡಿಮ್ಯಾಂಡ್ಅಪರ ಜಿಲ್ಲಾಧಿಕಾರಿ ಹೆಸರು ದುರ್ಬಳಕೆ ಮಾಡಿಕೊಂಡು ಹಣಕ್ಕೆ ಬೇಡಿಕೆ

Related Post

Leave a Reply

Your email address will not be published. Required fields are marked *

error: Content is protected !!