Mon. Dec 1st, 2025

ದರ್ಶನ್ ಫುಲ್‌ ಟೈಟ್‌ ಆದಾಗಲೇ ಈ ಕೃತ್ಯ ಮಾಡಿರಬಹುದು-ಭಾವನಾ ಬೆಳಗೆರೆ..!

ದರ್ಶನ್ ಫುಲ್‌ ಟೈಟ್‌ ಆದಾಗಲೇ ಈ ಕೃತ್ಯ ಮಾಡಿರಬಹುದು-ಭಾವನಾ ಬೆಳಗೆರೆ..!

ಜೂನ್ ೨೭: ರೇಣುಕಾಸ್ವಾಮಿ ಕೊಲೆ ಕೇಸ್‌ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮಾತ್ರವಲ್ಲ ಹಲವು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.

ಭಾವನಾ ಬೆಳಗೆರೆ ಮಾತನಾಡಿ ʻʻದರ್ಶನ್‌ ಅವರು ಕುಡಿದು ಮಾತನಾಡುವಾಗ ಅಗ್ರೆಸಿವ್‌ ಆಗಿ ಮಾತಾಡ್ತಾರೆ. ಇಲ್ಲ ಅಂದರೆ ಆರಾಮಾಗಿ ಮಾತನಾಡುತ್ತಾರೆ. ಪ್ರತಿ ಬಾರಿ ಮಾತನಾಡುವಾಗ “ಅಲ್ವಾ” ಎಂಬ ಉತ್ತರಕ್ಕೆ ಕಾಯುತ್ತಾರೆ. ಮಿಕ್ಕಿದ ದಿನದಲ್ಲಿ ಕ್ಯಾಮೆರಾಗೆ ಅಟ್ಯಾಕ್‌ ಮಾಡಲು ಬರುತ್ತಾರೆ. ಕುಡಿದಿದ್ದಾಗ ಯಾರು ಏನೇ ಹೇಳಿದ್ದರೂ ಒಪ್ಪಿಕೊಳ್ಳಲ್ಲ. ಇಂದು ನಾನು ತಂದೆಯವರೆ ಹಿಸ್ಟರಿ ಇಟ್ಟುಕೊಂಡು ಮಾತಾಡ್ತಾ ಇಲ್ಲ. ನನ್ನ ಸ್ವತಃ ಅಣುಭವ ಹಂಚಿಕೊಳ್ಳುತ್ತಿರುವೆʼʼಎಂದಿದ್ದಾರೆ.

ಆಗಿನ ಕಾಲದ ನಟರನ್ನು ನಾವು ಪೂಜಿಸುತ್ತಿದ್ದೇವು. ಅಣ್ಣಾವ್ರ ಆಗಲಿ ಹಲವು ನಟರು ಇಷ್ಟವಾಗುತ್ತಿದ್ದರು. ಆದರೆ ಆಗ ಅಭಿಮಾನಿಗಳ ನಡುವೆ ಜಿದ್ದಾ ಜಿದ್ದಿ ಇರಲಿಲ್ಲ. ಆದರೆ ಈಗ ದರ್ಶನ್‌ ಅಥವಾ ಅಪ್ಪು, ಸುದೀಪ್‌ ಈ ರೀತಿ ಅಭಿಮಾನಿಗಳು ಮಾತನಾಡಲು ಶುರು ಮಾಡಿದ್ದಾರೆ. ಮುಂಚೆ ಎಲ್ಲರೂ ಒಟ್ಟಿಗೆ ನಿಂತು ಬೆಳೆಸುತ್ತಿದ್ದರು. ಆದರೀಗ ಒಬ್ಬರ ಫ್ಯಾನ್ಸ್‌ ಇನ್ನೊಬ್ಬರ ಸಿನಿಮಾ ಕೂಡ ನೋಡುತ್ತಿಲ್ಲʼʼಎಂದಿದ್ದಾರೆ.

Related Post

Leave a Reply

Your email address will not be published. Required fields are marked *

error: Content is protected !!