ಯಾದಗಿರಿ, ಸೆ ೨೧:- ಕರ್ನಾಟಕ ರಾಜ್ಯದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ ಅವರು ಸೆಪ್ಟೆಂಬರ್ 21, 23, 24 ಮತ್ತು 25 ರಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಭೇಟಿ ಯೋಜನೆ ಬಗ್ಗೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಶ್ರೀಶೈಲ ಜಿ. ಬಿದರಕುಂದಿ ಅವರು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 21, 2024 (ಶನಿವಾರ):
- ಬೆಳಿಗ್ಗೆ 11:30 ಗಂಟೆಗೆ ಕಲಬುರಗಿಯಿಂದ ಶಹಾಪೂರ ಕಡೆಗೆ ಪ್ರಯಾಣ ಬೆಳೆಸುವರು.
- ಮಧ್ಯಾಹ್ನ 12:30ಕ್ಕೆ ಶಹಾಪೂರ ತಾಲ್ಲೂಕಿನ ಭೀಮರಾಯನಗುಡಿಯಲ್ಲಿ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
- ಈ ಕಾರ್ಯಕ್ರಮವು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ 164ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದೆ.
- ಮಧ್ಯಾಹ್ನ 2:00 ಗಂಟೆಗೆ ವಡಗೇರಾ ತಾಲ್ಲೂಕಿನ ತುಮಕೂರ ಜಾಮಾ ಮಸ್ಕಿದ್‌ನಲ್ಲಿ ಜಲ್ಸಾ ಅಜ್ಜತೆ ಮುಸ್ತಾಫಾ ರಹತುಲ್ಲಿಲ್ ಆಲಮೀನ್ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸುವರು.
- ಸಂಜೆ 5:00 ಗಂಟೆಗೆ ಕಲಬುರಗಿ ಕಡೆಗೆ ಪ್ರಯಾಣ ಬೆಳೆಸುವರು.
ಸೆಪ್ಟೆಂಬರ್ 23, 2024 (ಸೋಮವಾರ):
- ಬೆಳಿಗ್ಗೆ 8:30ಕ್ಕೆ ಕಲಬುರಗಿಯಿಂದ ಹೊರಟು 10:00ಕ್ಕೆ ಯಾದಗಿರಿ ನಗರಕ್ಕೆ ಆಗಮಿಸುತ್ತಾರೆ.
- ಡಿಸಿಸಿ ಕಛೇರಿಯಲ್ಲಿ ಜಿಲ್ಲಾ ಪಾರ್ಟಿ ಸಮಿತಿಯ ಮುಖಂಡರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವರು.
- ಮಧ್ಯಾಹ್ನ 2:00 ಗಂಟೆಗೆ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸುವರು.
- ಸಂಜೆ 5:00ಕ್ಕೆ ಕಲಬುರಗಿ ಕಡೆಗೆ ಪ್ರಯಾಣ ಬೆಳೆಸುವರು.
ಸೆಪ್ಟೆಂಬರ್ 24, 2024 (ಮಂಗಳವಾರ):
- ಬೆಳಿಗ್ಗೆ 9:00 ಗಂಟೆಗೆ ಕಲಬುರಗಿಯಿಂದ ಹೊರಟು 10:00ಕ್ಕೆ ಶಹಾಪೂರ ನಗರಕ್ಕೆ ಆಗಮಿಸುವರು.
- ಶಹಾಪೂರದಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಮಾಡುತ್ತ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
- ಸಂಜೆ 5:30ಕ್ಕೆ ಮತ್ತೆ ಕಲಬುರಗಿಗೆ ಪ್ರಯಾಣ ಬೆಳೆಸುವರು.
ಸೆಪ್ಟೆಂಬರ್ 25, 2024 (ಬುಧವಾರ):
- ಬೆಳಿಗ್ಗೆ 10:00ಕ್ಕೆ ಕಲಬುರಗಿಯಿಂದ ಹೊರಟು 11:30ಕ್ಕೆ ಯಾದಗಿರಿ ತಾಲ್ಲೂಕಿನ ಅರಕೇರೆ ಕೆ ಗ್ರಾಮಕ್ಕೆ ಭೇಟಿ ನೀಡುವರು.
- ಅಲ್ಲಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಧ್ಯಾಹ್ನ 1:00 ಗಂಟೆಗೆ ಮತ್ತೊಂದು ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
- ನಂತರ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆಯನ್ನು ನಡೆಸಿ, ಸಂಜೆ 5:00ಕ್ಕೆ ಕಲಬುರಗಿ ಕಡೆಗೆ ಪ್ರಯಾಣ ಬೆಳೆಸುವರು.
ಈ ಕಾರ್ಯಕ್ರಮದ ಅವಧಿಯಲ್ಲಿ ಶ್ರೀ ಶರಣಬಸಪ್ಪ ದರ್ಶನಾಪೂರ ಅವರು ಹಲವಾರು ಪ್ರಮುಖ ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
- ಆರು ತಿಂಗಳಿಂದ ಕಮಿಷನ್ ಬಾಕಿ — ನವೆಂಬರ್ ಪಡಿತರ ಎತ್ತುವಳಿ ನಿಲ್ಲಿಸಲು ವಿತರಕರ ಸಂಘದ ಎಚ್ಚರಿಕೆ
- ಯಾದಗಿರಿ ರೈತರಿಗೆ ಭಾರತ ಮಾಲಾ ಯೋಜನೆ ಬಾಧೆ — ಪರಿಹಾರ ಧನ ಹಾಗೂ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಡಾ. ಭೀಮಣ್ಣ ಮೇಟಿ ಆಗ್ರಹ
- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ; ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ನಾಮಪತ್ರ ಸಲ್ಲಿಕೆ
- ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ
- ಸಾರ್ವಜನಿಕ–ಅಧಿಕಾರಿ ಸಂವಾದ ಅಗತ್ಯ: RTI ಕಾಯ್ದೆ ಪರಿಣಾಮಕಾರಿತ್ವಕ್ಕೆ ಆಯುಕ್ತ ಬದ್ರುದ್ದೀನ್ ಕರೆ

