ಯಾದಗಿರಿ, ಮಾರ್ಚ್ 17:
ಈ ಸಂಧರ್ಭದಲ್ಲಿ ಪರಿಷತ್ತಿನ ಸದಸ್ಯರು ಮತ್ತು ಆಟೋ ಚಾಲಕರು ಭರ್ಜರಿಯಾಗಿ ಕಲ್ಲಂಗಡಿ, ಹಣ್ಣು ವಿತರಣೆ ಮಾಡುವ ಮೂಲಕ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಪುನೀತ್ ರಾಜ್‌ಕುಮಾರ್ ಅವರ ಸಮಾಜಮುಖಿ ಸೇವೆಯನ್ನು ಮೆಚ್ಚಿ, ಅವರ ಕೊಡುಗೆಗಳನ್ನು ನೆನಪಿಸಿಕೊಂಡು, ಸಾಮಾಜಿಕ ಸೇವೆ ಮತ್ತು ಸಹಾಯ ಹಸ್ತ ನೀಡಲು ನಿರ್ಧಾರ ಕೈಗೊಳ್ಳಲಾಯಿತು.
ಆಟೋ ಚಾಲಕರ ಪುನೀತ್ ಅಭಿಮಾನ
ಆಟೋ ಚಾಲಕರ ಪರಿಷತ್ತಿನ ಪುನೀತ್ ರಾಜ್‌ಕುಮಾರ್ ಅಪ್ಪಟ್ಟ ಅಭಿಮಾನಿಯಾಗಿರುವ ಮಲ್ಲಯ್ಯ ಮುಷ್ಟೂರು ಈ ಸಂದರ್ಭದಲ್ಲಿ ಮಾತನಾಡಿ, “ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರ ಪ್ರೇರಣಾ ಶಕ್ತಿಯಾಗಿದ್ದರು. ಅವರು ಕಲಾವಿದ ಮಾತ್ರವಲ್ಲ, ಮಾನವೀಯತೆ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ಸದಾ ಮುಂದಿದ್ದರು. ಅವರ ಆದರ್ಶಗಳನ್ನು ನಾವು ಅನುಸರಿಸಿ, ಸಮಾಜ ಸೇವೆಗೆ ಮುಂದಾಗಬೇಕು,” ಎಂದರು.
ಈ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಪದಾಧಿಕಾರಿಗಳಾದ ಬಾಗಪ್ಪ ರಾಗಿರ, ಶಿವಶರಣಪ್ಪ ಕುಂಬಾರ, ಹನುಮಯ್ಯ ಕಲಾಲ್, ಸಾಬಯ್ಯ ತಾಂಡೂಲ್ಕರ್, ಈಶ್ವರ್ ನಾಯಕ್, ಅಂಬುಜಿ ರಾವ್, ಆಶಾಪ ಜಟ್ಟಿ, ಮೌನೇಶ್ ಹುಸೇನಿ, ಹಣಮಂತ ಬಬಲಾದಿ, ನಾಗರಾಜ್ ಗುತ್ತೆದಾರ್, ದೇವು ನಾಗಲಪುರ್ ಮುಂತಾದವರು ಭಾಗವಹಿಸಿದ್ದರು
ಸಮಾಜಮುಖಿ ಸೇವೆ ಮುಂದುವರಿಯಲಿದೆ
ಈ ಸಂದರ್ಭದಲ್ಲಿ, ಪರಿಷತ್ತಿನ ಸದಸ್ಯರು ಇನ್ನು ಮುಂದೆ ಸಹ ಸಮಾಜಮುಖಿ ಸೇವೆ ನಿರ್ವಹಿಸುವ ಪ್ರತಿಜ್ಞೆ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಅನಾಥಾಶ್ರಮಕ್ಕೆ ಅಗತ್ಯ ಸಾಮಗ್ರಿಗಳನ್ನು ವಿತರಿಸುವ ನಿರ್ಧಾರ ಕೈಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯರು, ಆಟೋ ಚಾಲಕರು ಮತ್ತು ಪುನೀತ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ರೀತಿಯ ಜನ್ಮದಿನ ಆಚರಣೆ, ಪುನೀತ್ ರಾಜ್‌ಕುಮಾರ್ ಅವರ ಸಮಾಜಮುಖಿ ಚಟುವಟಿಕೆಗಳನ್ನು ಮುಂದುವರಿಸುವ ಸ್ಫೂರ್ತಿಯನ್ನು ಒದಗಿಸುತ್ತದೆ ಎಂದು ಪರಿಷತ್ತಿನ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.