ಯಾದಗಿರಿ, ಜನವರಿ 25: ಮೀಟರ್ ಬಡ್ಡಿ ದಂಗೆಕೋರರ ತಾಂಡವವು ಮತ್ತೊಮ್ಮೆ ಸಾಮಾನ್ಯ ಜನರ ಮೇಲೆ ಬಿದ್ದು, ಯುವಕನ ಪ್ರಾಣ ಕಸಿದುಕೊಂಡು ಆತಂಕ ಸೃಷ್ಟಿಸಿದೆ. ಲಾಡೇಜಗಲ್ಲಿಯ ಖಾಸೀಂ (ಬಿಲ್ಲಿ) ಎಂಬ 25 ವರ್ಷದ ಯುವಕನು, ಯಾಸೀನ್ ಎಂಬಾತನಿಂದ 35,000 ರೂ. ಸಾಲ ಪಡೆದಿದ್ದಾನೆ. ಈ ಸಾಲವನ್ನು ಮರುಪಾವತಿಸಲು ವಿಳಂಬವಾದ ಕಾರಣ, ಯಾಸೀನ್ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಖಾಸೀಂ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆಯ ವಿವರ:
ಯಾಸೀನ್, 19ನೇ ತಾರೀಖಿನೊಳಗೆ ಸಾಲವನ್ನು ಪಾವತಿಸುವಂತೆ ಖಾಸೀಂನನ್ನು ಒತ್ತಾಯಿಸಿದ್ದನು. ಆದರೆ, ಸಾಲ ಪಾವತಿಸಲು ಸ್ವಲ್ಪ ದಿನಾವಕಾಶ ಕೇಳಿದ ಖಾಸೀಂನ ಮಾತಿಗೆ ಕೋಪಗೊಂಡ ಯಾಸೀನ್, ಬಾರುಕೋಲು ಹಾಗೂ ಮೊಣಕಾಲಿನಿಂದ ಹಲ್ಲೆ ನಡೆಸಿ ಖಾಸೀಂನನ್ನು ಗಂಭೀರವಾಗಿ ಗಾಯಗೊಂಡಂತೆ ಮಾಡಿದ್ದಾನೆ.
ಚಿಕಿತ್ಸೆ ಫಲಕಾರಿಯಾಗದೆ ಸಾವಿಗೆ ದಾರಿ:
ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಖಾಸೀಂನನ್ನು ತಕ್ಷಣವೇ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಂಭೀರ ಸ್ಥಿತಿಯ ದೃಷ್ಠಿಯಿಂದ ವೈದ್ಯರು ಅವರನ್ನು ಕಲಬುರಗಿಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಹೆಚ್ಚು ಚಿಕಿತ್ಸೆಗಾಗಿ ಪ್ರಯತ್ನಿಸಿದರೂ ಖಾಸೀಂ ಕೊನೆಯುಸಿರೆಳೆದಿದ್ದಾನೆ.
ಪೊಲೀಸ್ ತನಿಖೆ:
ಈ ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾಸೀನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ತೀವ್ರ ಪರಿಶ್ರಮ ನಡೆಸುತ್ತಿದ್ದಾರೆ. ಮೀಟರ್ ಬಡ್ಡಿ ದಂಗೆಕೋರರ ವಿರುದ್ಧ ಸಾರ್ವಜನಿಕರು ತೀವ್ರ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಮಾಜದ ಆಕ್ರೋಶ:
ಈ ಘಟನೆಯು ಸಾರ್ವಜನಿಕರಲ್ಲಿ ಆಕ್ರೋಶವನ್ನು ಹುಟ್ಟಿಸಿದ್ದು, ಮೀಟರ್ ಬಡ್ಡಿ ದಂಗೆಕೋರರ ವಿರುದ್ಧ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಮುಗಿಲುಮುಟ್ಟುತ್ತಿದೆ. ಜನ ಸಾಮಾನ್ಯರ ಬಡಜನರ ಜೀವನವನ್ನು ಹಾಳುಮಾಡುವ ಅಕ್ರಮ ಚಟುವಟಿಕೆಗಳು ತಕ್ಷಣವೇ ನಿಲ್ಲಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಕ್ರಮ ಬಡ್ಡಿ ವ್ಯವಸ್ಥೆಗೆ ಕಡಿವಾಣ ಅಗತ್ಯ:
ಸಮಾಜದ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ನಿಗ್ರಹಿಸೋಲು ಮೀಟರ್ ಬಡ್ಡಿ ದಂಗೆಕೋರರು ಈ ರೀತಿಯ ಕೃತ್ಯಗಳಿಗೆ ಕೈಹಾಕುತ್ತಿರುವುದು ಹೆಚ್ಚುತ್ತಿದ್ದು, ಈ ಪರಿಸ್ಥಿತಿಗೆ ಕಠಿಣ ನಿಯಮಾವಳಿ ಮತ್ತು ಕಾನೂನಾತ್ಮಕ ಕ್ರಮ ಅವಶ್ಯವಾಗಿದೆ.
ಈ ಘಟನೆ ಯಾದಗಿರಿ ಜಿಲ್ಲೆಯ law and order ಸ್ಥಿತಿಯನ್ನು ಪ್ರಶ್ನೆಯ ಅಡಿ ತಂದು, ಸಾರ್ವಜನಿಕರಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿದೆ. ಮೃತ ಖಾಸೀಂನ ಕುಟುಂಬ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದು, ಈ ಪ್ರಕರಣದ ಶೀಘ್ರ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
- ಆರು ತಿಂಗಳಿಂದ ಕಮಿಷನ್ ಬಾಕಿ — ನವೆಂಬರ್ ಪಡಿತರ ಎತ್ತುವಳಿ ನಿಲ್ಲಿಸಲು ವಿತರಕರ ಸಂಘದ ಎಚ್ಚರಿಕೆ
- ಯಾದಗಿರಿ ರೈತರಿಗೆ ಭಾರತ ಮಾಲಾ ಯೋಜನೆ ಬಾಧೆ — ಪರಿಹಾರ ಧನ ಹಾಗೂ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಡಾ. ಭೀಮಣ್ಣ ಮೇಟಿ ಆಗ್ರಹ
- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ; ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ನಾಮಪತ್ರ ಸಲ್ಲಿಕೆ
- ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ
- ಸಾರ್ವಜನಿಕ–ಅಧಿಕಾರಿ ಸಂವಾದ ಅಗತ್ಯ: RTI ಕಾಯ್ದೆ ಪರಿಣಾಮಕಾರಿತ್ವಕ್ಕೆ ಆಯುಕ್ತ ಬದ್ರುದ್ದೀನ್ ಕರೆ

