ಮಸೂದೆಯನ್ನು ಅಂಗೀಕರಿಸಿದ ನಂತರ ಪ್ರಧಾನಿ ಮೋದಿ ಈ ಬಗ್ಗೆ Xನಲ್ಲಿ ಮಾತನಾಡಿದ್ದಾರೆ. ‘ನಮ್ಮ ದೇಶದ ಪ್ರಜಾಪ್ರಭುತ್ವದ ಪಯಣದಲ್ಲಿ ಇದೊಂದು ಐತಿಹಾಸಿಕ ಕ್ಷಣ! 140 ಕೋಟಿ ಭಾರತೀಯರಿಗೆ ಅಭಿನಂದನೆಗಳು! ನಾರಿ ಶಕ್ತಿ ವಂದನ್ ಕಾಯ್ದೆಗೆ ಸಂಬಂಧಿಸಿದ ಮಸೂದೆಗೆ ಮತ ಚಲಾಯಿಸಿದ ಎಲ್ಲ ರಾಜ್ಯಸಭಾ ಸಂಸದರಿಗೆ ಹೃತ್ತೂರ್ವಕ ಕೃತಜ್ಞತೆಗಳು. ಇದು ಸರ್ವಾನುಮತದಿಂದ ಅಂಗೀಕಾರವಾಗಿರುವುದು ತುಂಬ ಉತ್ತೇಜನಕಾರಿಯಾಗಿದೆ’ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
140 ಕೋಟಿ ಭಾರತೀಯರಿಗೆ ಅಭಿನಂದನೆ ಸಲ್ಲಿಸಿದ ಮೋದಿ
ರಾಜ್ಯಸಭೆಯಲ್ಲಿ ಮಹಿಳಾ ಮಸೂದೆ ಅಂಗೀಕಾರಗೊಂಡಿದ್ದಕ್ಕಾಗಿ 140 ಕೋಟಿ ಭಾರತೀಯರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇದು ದೇಶದ ಪ್ರಜಾಸತ್ತಾತ್ಮಕ ಪಯಣ ನಿರ್ಧರಿಸುವ ಕ್ಷಣವಾಗಿದೆ. ಎಂದಿದ್ದಾರೆ.’ನಾರಿ ಶಕ್ತಿ ವಂದನ್ ವಿಧೇಯಕಕ್ಕೆ (ಮಹಿಳಾ ಮೀಸಲಾತಿ ಮಸೂದೆ) ಮತ ಹಾಕಿದ ರಾಜ್ಯಸಭಾ ಸಂಸದರಿಗೆ ಕೃತಜ್ಞತೆ ಸಲ್ಲಿಸಿದರು. ಈ ಮಸೂದೆ ದೇಶದಲ್ಲಿ ಮಹಿಳಾ ಸಬಲೀಕರಣ & ಪ್ರಾತಿನಿಧ್ಯವನ್ನು ಬಲಪಡಿಸುತ್ತಿದ್ದು, ಇದು ದೇಶವನ್ನು ರೂಪಿಸಿದ ಅಸಂಖ್ಯಾತ ಮಹಿಳೆಯರಿಗೆ ಗೌರವ ಸಂದಿದೆ ಎಂದಿದ್ದಾರೆ.
‘ನಾರಿ ಶಕ್ತಿ ವಂದನ್’ ಮಸೂದೆ ಮೈಲಿಗಲ್ಲು: ಧನಕ
ದೇಶದ ಮಹಿಳೆಯರ ಶಕ್ತಿಯನ್ನು ಸಬಲೀಕರಣಗೊಳಿಸುವ ರಾಷ್ಟ್ರದ ಪಯಣದಲ್ಲಿ ‘ನಾರಿ ಶಕ್ತಿ ವಂದನ್’ ಮಸೂದೆಯು ಒಂದು ಮೈಲಿಗಲ್ಲು ಆಗಿದೆ ಎಂದು ರಾಜ್ಯಸಭಾ ಅಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿ, ರಾಜ್ಯಸಭೆಯಲ್ಲಿ ಈ ವಿಧೇಯಕವು ಎಲ್ಲ ಪಕ್ಷಗಳ ಸದಸ್ಯರ ಭಾಗವಹಿಸುವಿಕೆಯೊಂದಿಗೆ ವ್ಯಾಪಕ ಚರ್ಚೆಯ ಬಳಿಕ ಸರ್ವಾನುಮತದಿಂದ ಅಂಗೀಕರಿಸಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಸೂದೆ ಬುಧವಾರ ಲೋಕಸಭೆಯಲ್ಲಿ ಅಂಗೀಕಾರ ಪಡೆದಿತ್ತು
ಮಹಿಳಾ ಮೀಸಲಾತಿ ಮಸೂದೆ, ಜನಗಣತಿಗೂ ಏನು ಸಂಬಂಧ?: ಖರ್ಗೆ
ಮಹಿಳಾ ವಿಧೇಯಕ ಜಾರಿಗೆ ಜನಗಣತಿ ಮತ್ತು ಡಿಲಿಮಿಟೇಶನ್ ಅಗತ್ಯ ಎಂಬ ಕೇಂದ್ರ ಸರ್ಕಾರದ ಹೇಳಿಕೆಗೆ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಪಂಚಾಯತ್ ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದರೆ, ಮಸೂದೆ ಅನುಷ್ಠಾನಕ್ಕೆ ಜನಗಣತಿ ಮತ್ತು ಡಿಲಿಮಿಟೇಶನ್‌ನ ಅಗತ್ಯವೇನು? ಸರಕಾರ ಕೂಡಲೇ ವಿಧೇಯಕದ ಮುಂದಿರುವ ಅಡೆತಡೆಗಳನ್ನು ನಿವಾರಿಸಿ ಜಾರಿಗೆ ತರಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ