ಯಾದಗಿರಿ, ಜ 31:–
ಈ ಹಾಸ್ಟೆಲ್‌ನಲ್ಲಿ ಬಾಲುಹುಳು, ನುಷಿಹುಳು ಇದ್ದರೂ ಕೂಡ ಅಡುಗೆ ಸಿಬ್ಬಂದಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಮಕ್ಕಳು ದೂರು ನೀಡಿದರೂ ಸಿಬ್ಬಂದಿ ‘ಡೋಂಟ್ ಕೇರ್’ ಧೋರಣಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಕ್ಕಳಿಗೆ ಅರೆಬರೆ ಊಟ ನೀಡಲಾಗುತ್ತಿದ್ದು, ಉಳಿದ ಆಹಾರವನ್ನು ಸಿಬ್ಬಂದಿಯೇ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿರುವ ಆರೋಪಗಳು ಕೇಳಿ ಬಂದಿವೆ.
ಆಹಾರ ವಂಚನೆ – ದಾಖಲೆಗಳಲ್ಲಿ ಗೊಂದಲ!
ಹಾಸ್ಟೆಲ್ ದಾಖಲೆಯಲ್ಲಿ 102 ಮಕ್ಕಳ ಹೆಸರು ಇದ್ದರೂ, ವಾಸ್ತವದಲ್ಲಿ ಕೇವಲ 30-40 ಮಕ್ಕಳು ಮಾತ್ರ ಹಾಸ್ಟೆಲ್‌ನಲ್ಲಿ ಇದ್ದಾರೆ. ಹಾಸ್ಟೆಲ್‌ಗೆ ಬರಬೇಕಾದ 102 ಮಕ್ಕಳ ರೇಷನ್ ಸರಕಿನಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಅಡುಗೆ ಸಾಮಗ್ರಿಗಳು ಮತ್ತು ಕಿಟ್‌ಗಳನ್ನು ಸಿಬ್ಬಂದಿಯೇ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಆರೋಪಗಳು ತೀವ್ರಗೊಂಡಿವೆ.
ಮಕ್ಕಳ ಅಹಾರ ಹಕ್ಕಿಗೆ ಧಕ್ಕೆ – ತಕ್ಷಣ ಕ್ರಮಕ್ಕೆ ಒತ್ತಾಯ
ಹಾಸ್ಟೆಲ್‌ನಲ್ಲಿ ನಡೆಯುತ್ತಿರುವ ಅಹಾರ ವಂಚನೆ, ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಮತ್ತು ನಿರ್ಲಕ್ಷ್ಯದ ವಿರುದ್ಧ ಮಕ್ಕಳು ವಾರ್ಡನ್ ಹಾಗೂ ಸಿಬ್ಬಂದಿ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೇ ನೋಡಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತರೆ ಒಳಿತು!
ಮಕ್ಕಳ ಆರೋಗ್ಯದ ಜೊತೆ ಆಟವಾಡುವ ಈ ನಿರ್ಲಕ್ಷ್ಯತೆಯನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸಂಬಂಧಿತ ಇಲಾಖೆ ತಕ್ಷಣ ಪರಿಶೀಲನೆ ನಡೆಸಿ, ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಪೋಷಕರ ಹಾಗೂ ಸ್ಥಳೀಯರ ಆಗ್ರಹ.