‘ಸ್ವಚ್ಛತಾ ಅಭಿಯಾನ’ದ ಭಾಗವಾಗಿ ಪ್ರಧಾನಿ ಮೋದಿ ಅವರು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಂಕಿತ್ ಬೈನ್ ಪುರಿಯಾ ಅವರೊಂದಿಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಈ ಅಂಕಿತ್ ಯಾರೆಂದರೆ? ಅವರು ಫಿಟೈಸ್ ಇನ್‌ಫ್ಯುಯೆನ್ಸರ್ ಮತ್ತು ಮಾಜಿ ಕುಸ್ತಿಪಟು. ಅಂಕಿತ್ 4.9M ಫಾಲೋವರ್ಸ್ ಹೊಂದಿದ್ದಾರೆ. ಯುವಕರಲ್ಲಿ ಫಿಟ್ಟೆಸ್ ಸಂಸ್ಕೃತಿಯನ್ನು ಉತ್ತೇಜಿಸಲು 75 ದಿನಗಳ ಕಠಿಣ ಸವಾಲನ್ನು ಪ್ರಾರಂಭಿಸುವ ಮೂಲಕ ಅವರು ಪ್ರಸಿದ್ಧರಾಗಿದ್ದಾರೆ.
ವಿಡಿಯೋ
ಪ್ರಧಾನಿ ಮೋದಿ ನಾಳೆ ಗಾಂಧಿ ಜಯಂತಿ ಇರುವ ಹಿನ್ನೆಲೆ ಇಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ವೇಳೆ ಫಿಟ್‌ನೆಸ್ ಪರಿಣಿತ ಅಂಕಿತ್ ಬೈಯನ್‌ಪುರಿಯಾ ಪಾಲ್ಗೊಂಡಿದ್ದರು. ಈ ವೀಡಿಯೋವನ್ನು ಖುದ್ದು ಪ್ರಧಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೋದಿ ಜತೆಗಿನ ವಿಡಿಯೋದಲ್ಲಿರುವ ಅಂಕಿತ್ ಯಾರು?

