Mon. Dec 1st, 2025

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲುಗಡೆ:ಹೊಸ ವೇಳಾಪಟ್ಟಿ.

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲುಗಡೆ:ಹೊಸ ವೇಳಾಪಟ್ಟಿ.

ಜು೨೬: ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಸರ್ ಎಂ. ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ (Vande Bharat Express train) ಯಾದಗಿರಿ (Yadgiri) ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ನೀಡಲು ನಿರ್ಧರಿಸಿದೆ. ಈ ಹೊಸ ವ್ಯವಸ್ಥೆ ಜುಲೈ 27ರಿಂದ ಜಾರಿಗೆ ಬರಲಿದೆ.

ರೈಲು ಸಂಖ್ಯೆ 22232 ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಜುಲೈ 27 ರಿಂದ ರಾತ್ರಿ 9:44 ಗಂಟೆಗೆ ಯಾದಗಿರಿ ನಿಲ್ದಾಣಕ್ಕೆ ಆಗಮಿಸಿ, 9:45ಕ್ಕೆ ಹೊರಡಲಿದೆ. ಇದೇ ರೀತಿ, ರೈಲು ಸಂಖ್ಯೆ 22231 ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಜುಲೈ 28 ರಿಂದ ಬೆಳಿಗ್ಗೆ 5:54 ಕ್ಕೆ ಯಾದಗಿರಿ ನಿಲ್ದಾಣಕ್ಕೆ ಬಂದು, 5:55 ಕ್ಕೆ ಹೊರಡಲಿದೆ.

ಇದನ್ನು ಓದಿ : ಭೀಮಾ ನದಿಗೆ ಭಾರೀ ಪ್ರವಾಹ: ಮೀನುಗಾರರು ನಿರ್ಲಕ್ಷ್ಯ, ಜಿಲ್ಲಾಡಳಿತ ಎಚ್ಚರಿಕೆ

ಈ ಹೆಚ್ಚುವರಿ ನಿಲುಗಡೆ ಯಾದಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತದೆ. ವಂದೇ ಭಾರತ್ ರೈಲು ಮಾರ್ಚ್ 12ರಿಂದ ಸಂಚರಿಸುತ್ತಿದೆ, ಆದರೆ ಈ ವರೆಗೂ ಯಾದಗಿರಿಯಲ್ಲಿ ನಿಲ್ಲದೆ ಪ್ರಯಾಣಿಸುತ್ತಿತ್ತು. ಜಿಲ್ಲೆಯ ಜನರ ಮತ್ತು ಸಂಘಟನೆಗಳ ಒತ್ತಾಯದ ಫಲವಾಗಿ, ಇನ್ನು ಮುಂದೆ ರೈಲು ಯಾದಗಿರಿಯಲ್ಲಿಯೂ ನಿಲ್ಲಲಿದೆ.

Related Post

Leave a Reply

Your email address will not be published. Required fields are marked *

error: Content is protected !!