Tue. Jul 22nd, 2025

ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಆಹಾರ ಇಲಾಖೆಯಿಂದ ತುರ್ತು ಕ್ರಮ

ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಆಹಾರ ಇಲಾಖೆಯಿಂದ ತುರ್ತು ಕ್ರಮ

ಅ ೦೧:- ರಾಜ್ಯದ ಆಹಾರ ಇಲಾಖೆ ಅನರ್ಹ ಪಡಿತರ ಚೀಟಿಗಳನ್ನು ತ್ವರಿತವಾಗಿ ರದ್ದುಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ, ಕುಟುಂಬ ತಂತ್ರಾಂಶದ ಮೂಲಕ ಪತ್ತೆಹಚ್ಚಲಾದ 22,62,413 ಅನರ್ಹ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳನ್ನು 10 ದಿನಗಳೊಳಗೆ ರದ್ದುಪಡಿಸುವಂತೆ ನಿರ್ದೇಶನ ನೀಡಲಾಗಿದೆ. ಪರಿಶೀಲನೆ ಕಾರ್ಯ ಮುಗಿದ ನಂತರ, ರಾಜ್ಯದ ಎಲ್ಲಾ ಜಂಟಿ ಹಾಗೂ ಉಪನಿರ್ದೇಶಕರಿಗೆ ಕೇಂದ್ರ ಕಚೇರಿಗೆ ವಿವರ ವರದಿ ಸಲ್ಲಿಸುವಂತೆ ಆಹಾರ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲು ಆಹಾರ ಇಲಾಖೆ ‘ಕುಟುಂಬ ತಂತ್ರಾಂಶ’ದ ಮೊರೆ ಹೋಗಿದ್ದು, ಈ ತಂತ್ರಾಂಶದ ಮೂಲಕ ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ ನೀಡಲಾದ 10,97,621 ಅನರ್ಹ ಬಿಪಿಎಲ್ ಚೀಟಿಗಳು ಮತ್ತು 1,06,152 ಅಂತ್ಯೋದಯ ಚೀಟಿಗಳನ್ನು ಪತ್ತೆ ಮಾಡಲಾಗಿದೆ. ಈ ಪೈಕಿ 10,54,368 ಪಡಿತರ ಚೀಟಿಗಳನ್ನು ವಾರ್ಷಿಕ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು ಬಳಸುತ್ತಿದ್ದಾರೆ. 4,272 ಪಡಿತರ ಚೀಟುಗಳು ಕೆಜಿಐಡಿ (KGID) ಮತ್ತು ಎಚ್‌ಆರ್‌ಎಂಎಸ್‌ (HRMS)‌ನಲ್ಲಿ ದಾಖಲಾಗಿರುವಂತೆ ಪತ್ತೆಯಾಗಿದೆ.

ರಾಜ್ಯ ಸರ್ಕಾರದ 14 ಮಾನದಂಡಗಳಂತೆ, ಬಿಪಿಎಲ್ ಕಾರ್ಡ್ ಅನ್ನು ಹೊಂದಲು ಅರ್ಹತೆಯಿಲ್ಲದವರ ಪೈಕಿ, ವರ್ಷಕ್ಕೆ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು, ಮನೆಯಲ್ಲಿ ಕಾರು ಹೊಂದಿರುವವರು, ಆದಾಯ ತೆರಿಗೆ ಪಾವತಿಸುವವರು, ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಅನುದಾನಿತ-ಅನುದಾನರಹಿತ ಕಾಲೇಜು ನೌಕರರು, ಹಾಗೂ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಹೊಂದಿರುವವರು ಸೇರಿದ್ದಾರೆ. 100 ಸಿಸಿ ಮೇಲ್ಪಟ್ಟ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ ವಾಹನಗಳು ಮತ್ತು ಖಾಸಗಿ ವಾಹನಗಳನ್ನು ಹೊಂದಿರುವವರಿಂದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಆಹಾರ ಇಲಾಖೆ ಪ್ರತಿದಿನದ ಮಾಹಿತಿಯನ್ನು ಕಚೇರಿಯಿಂದ ಒದಗಿಸಲಾದ ಗೂಗಲ್ ಡ್ರೈವ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಿದ್ದು, ಅನುಮಾನಿತ ಚೀಟುಗಳನ್ನು ತುರ್ತಾಗಿ ಪರಿಶೀಲಿಸಿ, 10 ದಿನಗಳೊಳಗೆ ಪೂರ್ಣಗೊಳಿಸಲು ಆದೇಶಿಸಲಾಗಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!