ನಾಳೆ (ಅ.8) ರಾಜಸ್ಥಾನದಲ್ಲಿ ವಿಶ್ವದ ಅತಿ ದೊಡ್ಡ ರೊಟ್ಟಿ ತಯಾರಾಗಲಿದ್ದು, ಇತಿಹಾಸ ನಿರ್ಮಾಣವಾಗಲಿದೆ. ಈ ರೊಟ್ಟಿಯ ತೂಕ 151 Kg ಇರಲಿದೆ. ಇದನ್ನು ತಯಾರಿಸಲು ರಾಜಸ್ಥಾನ, ಗುಜರಾತ್ & ಮಹಾರಾಷ್ಟ್ರದಿಂದ 12 ತರಬೇತಿ ಪಡೆದ ಬಾಣಸಿಗರನ್ನು ಕರೆಸಲಾಗಿದೆ. 20 ಅಡಿ ಉದ್ದದ ಕಬ್ಬಿಣದ ಪೈಪ್‌ನಿಂದ ಗ್ಯಾಸ್ ಪೂರೈಸಿ ಇದನ್ನು ತಯಾರಿಸಲಾಗುತ್ತದೆ. ಭಿಲ್ವಾರದಲ್ಲಿ ಹರಿಸೇವಾಧಾಮದ ಮಹಾಮಂಡಲೇಶ್ವರ ಸಂತ ಹಂಸರಾಮರ ಸನ್ನಿಧಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

