ಮೈಸೂರು ಕಡೆಯಿಂದ ಕನಕಪುರದ ಕಡೆಗೆ ವೇಗವಾಗಿ ಬರುತ್ತಿದ್ದ ಕಾರೊಂದು ನೈಸ್ ರಸ್ತೆಯ ಸೋಮಪುರದ ಬಳಿಗೆ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮೋರಿಗೆ ಗುದ್ದಿದ್ದು, ಕೆಳಗೆ ಪಲ್ಟಿಯಾಗಿದೆ. ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಸಾರ್ವಜನಿಕರು, ಐವರ ಪೈಕಿ ಮೂವರನ್ನು ರಕ್ಷಿಸಿದ್ದಾರೆ. ಆದರೆ ತಾಯಿ, ಮಗುವನ್ನು ರಕ್ಷಿಸಲಾಗದ ಕಾರಣ ಕಾರಿನಲ್ಲೇ ಸಜೀವವಾಗಿ ದಹಿಸಿ ಹೋಗಿದ್ದಾರೆ. ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

