Tue. Jul 22nd, 2025

ಯುವಕರು ಸ್ವಯಂ ಉದ್ಯೋಗ ಪಡೆದು ಸ್ವಾವಲಂಬಿಗಳಾಗಬೇಕು: ಟಿ.ಎನ್. ಭೀಮುನಾಯಕ

ಯುವಕರು ಸ್ವಯಂ ಉದ್ಯೋಗ ಪಡೆದು ಸ್ವಾವಲಂಬಿಗಳಾಗಬೇಕು: ಟಿ.ಎನ್. ಭೀಮುನಾಯಕ

ಯಾದಗಿರಿ, ಮಾ ೨೨:-

ಯುವಕರು ರಾಜಕೀಯ ಕ್ಷೇತ್ರಕ್ಕೆ ಹೋಗುವ ಬದಲಿಗೆ ಸ್ವಯಂ ಉದ್ಯೋಗವನ್ನು ಮಾಡಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಿ ಬೆಳೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎನ್. ಭೀಮುನಾಯಕ ಅವರು ಸಲಹೆ ನೀಡಿದರು.

ಕರವೇ ಜಿಲ್ಲಾ ಕಚೇರಿಯಲ್ಲಿ ಕರವೇಗೆ ಸೇರ್ಪಡೆಯಾದ ಜನಾರ್ಧನ ಬಡಿಗೇರ ಚಾಮನಳ್ಳಿ ಅವರಿಗೆ ಯಾದಗಿರಿ ತಾಲ್ಲೂಕು ನೂತನ ಯುವ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶಪತ್ರ ವಿತರಿಸಿ ಅವರು ಮಾತನಾಡಿದರು. ಯುವಕರು ದೇಶದ ಭವಿಷ್ಯ ಆಗಿರುವುದರಿಂದ ಸ್ವಾವಲಂಬಿ ಜೀವನ ರೂಪಿಸಬೇಕು. ಈ ನಿಟ್ಟಿನಲ್ಲಿ ಉತ್ಪಾದನಾಧಾರಿತ ಉದ್ಯೋಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಭಾಷೆ, ನುಡಿ, ನೆಲ, ಜಲ ರಕ್ಷಣೆಗೆ ಯುವ ಶಕ್ತಿ:
ಯುವಕರು ನಾಡು, ನುಡಿ, ನೆಲ, ಜಲ ಹಾಗೂ ಭಾಷೆ ರಕ್ಷಣೆಗಾಗಿ ಸಂಘಟಿತವಾಗಿ ಕೆಲಸ ಮಾಡಬೇಕು. ಉತ್ಪಾದಕತೆಯತ್ತ ಗಮನಹರಿಸಿ ದೇಶದ ಆರ್ಥಿಕ ಬೆಳವಣಿಗೆಗೆ ನೆರವಾಗಬೇಕು. ಸ್ವಾವಲಂಬಿ ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಸಬಲೀಕರಣಗೊಂಡ ನಂತರ ಇತರರಿಗೆ ಮಾರ್ಗದರ್ಶಕರಾಗಿ ಮುಂದುವರಿಯಬೇಕು ಎಂದು ಭೀಮುನಾಯಕ ಸಲಹೆ ನೀಡಿದರು.

ನೂತನ ಪದಾಧಿಕಾರಿಗಳ ಜವಾಬ್ದಾರಿ:
ಯಾದಗಿರಿ ತಾಲ್ಲೂಕು ನೂತನ ಯುವ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಜನಾರ್ಧನ ಬಡಿಗೇರ ಚಾಮನಳ್ಳಿ ಮತ್ತು ಇತರ ಪದಾಧಿಕಾರಿಗಳು ಸಂಘಟನೆಯನ್ನು ಬಲಪಡಿಸಿ ಸಂಘಟಿತ ಹೋರಾಟ ರೂಪಿಸುವ ಮೂಲಕ ಯುವಕರಿಗೆ ಮಾರ್ಗದರ್ಶನ ನೀಡಬೇಕೆಂದು ಅವರು ಕರೆ ನೀಡಿದರು. ಯುವಕರ ಸಂಘಟನೆ ಸಮಾಜಿಕ ಮತ್ತು ಆರ್ಥಿಕ ವಲಯದಲ್ಲಿ ಬಲವನ್ನು ಹೆಚ್ಚಿಸಬೇಕು.

ಸಂಗಟಿತ ಹೋರಾಟದಿಂದ ಬೆಳವಣಿಗೆ:
ಸಂಘಟಿತ ಹೋರಾಟದ ಮೂಲಕ ಭಾವಿ ಪೀಳಿಗೆಗೆ ಸ್ಪೂರ್ತಿಯುಟ್ಟಿಸುವ ಕಾರ್ಯ ಯುವ ಘಟಕದ ಮುಖ್ಯ ಗುರಿಯಾಗಿರಬೇಕು. ಸಂಘಟಿತ ಶಕ್ತಿ ಮಾತ್ರ ಸಮುದಾಯದ ಪ್ರಗತಿಗೆ ದಾರಿ ತೋರಿಸಬಲ್ಲದು. ಉದ್ಯಮ ಮತ್ತು ಉದ್ಯೋಗ ಸೃಷ್ಟಿ ಮೂಲಕ ಯುವಕರು ಆರ್ಥಿಕವಾಗಿ ಬಲಿಷ್ಠರಾಗಿ ಸಮಾಜಕ್ಕೆ ಪ್ರೇರಣೆ ಆಗಬೇಕು ಎಂದು ಭೀಮುನಾಯಕ ಅವರು ಸಲಹೆ ನೀಡಿದರು.

ಸಭೆಯಲ್ಲಿ ಹಾಜರಿದ್ದವರು:
ಈ ಸಂದರ್ಭದಲ್ಲಿ ಶರಣಪ್ಪ ದಳಪತಿ ಶೆಟ್ಟಿಗೇರಾ, ರವಿ ಜಮ್ಮಾರ, ಅಶೋಕ ನಾಯಕ, ನಾಗರಾಜ ಪಿಲ್ಲಿ, ರಮೇಶ ಡಿ.ನಾಯಕ ಸೇರಿದಂತೆ ಕರವೇ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!