ಸುರಪುರ, ಜ ೨೯:-
ಮಕ್ಕಳ ಅಳಲು ಶಾಸಕರ ಮುಂದೆ
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಈ ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ತರುವಂತಾ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಆಹಾರದ ಗುಣಮಟ್ಟ ಕಡಿಮೆಯಿದ್ದು, ನಿಯಮಿತ ಊಟವೂ ನೀಡಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಶಾಸಕರ ಎದುರು ಅಳಲು ತೋಡಿಕೊಂಡರು. ಹಾಸ್ಟೆಲ್‌ನ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಮಕ್ಕಳು ಆತಂಕ ವ್ಯಕ್ತಪಡಿಸಿದರು.
ವಾರ್ಡನ್‌ಗೆ ಶಾಸಕರ ಕ್ಲಾಸ್
ಶಾಸಕರು ತಕ್ಷಣವೇ ಹಾಸ್ಟೆಲ್ ವಾರ್ಡನ್ ಅನ್ನು ಎದುರಿಸಿ, ಮಕ್ಕಳ ಸಮಸ್ಯೆಗಳ ಬಗ್ಗೆ ಸ್ಪಷ್ಟ ಉತ್ತರ ಕೇಳಿದರು. “ಮಕ್ಕಳಿಗೆ ಮೆನು ಪ್ರಕಾರ ನಿತ್ಯ ಊಟ ನೀಡುವುದಿಲ್ಲ, ಹಾಸ್ಟೆಲ್‌ನಲ್ಲಿ ಮಕ್ಕಳನ್ನು ಕತ್ತೆ ಕಾಯೋಕೆ ಇಡುತ್ತಿದ್ದೀರಾ?” ಎಂದು ಗರಂ ಆದ ಶಾಸಕ ವಾರ್ಡನ್‌ಗೆ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಹಾಸ್ಟೆಲ್ ಸಿಬ್ಬಂದಿಗೂ ತರಾಟೆ ತೆಗೆದುಕೊಂಡ ಶಾಸಕರು, ಹಾಸ್ಟೆಲ್ ನಿರ್ವಹಣಾ ಸ್ಥಿತಿಯನ್ನು ಪ್ರಶ್ನಿಸಿದರು.
ಹಾಸ್ಟೆಲ್ ಪರಿಶೀಲನೆ
ಇದರ ಬಳಿಕ ಶಾಸಕರು ಹಾಸ್ಟೆಲ್‌ನ ಎಲ್ಲ ಕೋಣೆಗಳನ್ನು ವೀಕ್ಷಿಸಿ, ಅಡುಗೆ ಕೋಣೆ, ತಿನಿಸುಗಳ ಗುಣಮಟ್ಟ, ಹಾಸ್ಟೆಲ್‌ನ ವಾಸ್ತವ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು. ಅಡುಗೆ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಇಲ್ಲ, ಆಹಾರ ಸರಿಯಾಗಿ ರಂಧಿಸಲಾಗುತ್ತಿಲ್ಲ ಎಂಬ ವಿಷಯ ಕೂಡ ಈ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಕಠಿಣ ಎಚ್ಚರಿಕೆ
ಶಾಸಕರು ಹಾಸ್ಟೆಲ್ ನಿರ್ವಹಣಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಾ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸೂಕ್ತ ಸೌಲಭ್ಯ ಒದಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. “ಹಾಸ್ಟೆಲ್ ವಾಸ್ತವ್ಯದಲ್ಲಿರುವ ವಿದ್ಯಾರ್ಥಿಗಳು ನಮ್ಮ ಭವಿಷ್ಯ. ಅವರ ಕಲಿಕೆಗೆ ಮತ್ತು ಆರೋಗ್ಯಕ್ಕೆ ಅಪಾಯವಾಗುವಂತಿಲ್ಲ,” ಎಂದು ಶಾಸಕರು ಹೇಳಿದರು.
ಸಮಾಜದ ಪ್ರತಿ ಕ್ರಿಯೆ
ಈ ಘಟನೆಯು ಸ್ಥಳೀಯ ಜನರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಾಸ್ಟೆಲ್‌ಗಳ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ಪ್ರಭಾವಿ ನಿಗಾ ಇರಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಮಕ್ಕಳು ಸುರಕ್ಷಿತವಾಗಿರಲು, ಉತ್ತಮ ಸೌಲಭ್ಯಗಳನ್ನು ಪಡೆಯಲು ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಇನ್ನಷ್ಟು ಗಮನ ಹರಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.