Sun. Jul 20th, 2025

ಕೋಟ್ಯಾಂತರ ರೂ. ಖರ್ಚಾದರೂ ಕ್ರೀಡಾಂಗಣ ದರಿದ್ರಾವಸ್ಥೆ: ಯಾದಗಿರಿಯಲ್ಲಿ ಅನುದಾನ ಲೂಟಿ ಆರೋಪ!

ಕೋಟ್ಯಾಂತರ ರೂ. ಖರ್ಚಾದರೂ ಕ್ರೀಡಾಂಗಣ ದರಿದ್ರಾವಸ್ಥೆ: ಯಾದಗಿರಿಯಲ್ಲಿ ಅನುದಾನ ಲೂಟಿ ಆರೋಪ!

ಯಾದಗಿರಿ, ಜುಲೈ 20: ಜಿಲ್ಲೆಯ ಕ್ರೀಡಾಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಈ ಅನುದಾನ ಸಂಪೂರ್ಣವಾಗಿ ಅವ್ಯವಹಾರಕ್ಕೆ ಒಳಗಾಗಿದ್ದು, ಜಿಲ್ಲಾ ಕ್ರೀಡಾಂಗಣದ ಸ್ಥಿತಿ ಆಕ್ಷೇಪಾರ್ಹವಾಗಿದೆ ಎಂಬುದು ಸ್ಥಳೀಯ ಕ್ರೀಡಾಪಟುಗಳ ಆರೋಪವಾಗಿದೆ.

ಯಾದಗಿರಿ ನಗರದ ಹೃದಯಭಾಗದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಮಂಜೂರಾಗಿದೆ. ಆದರೆ ಈ ಕಾಮಗಾರಿಗಳು ಇನ್ನೂ ಪೂರ್ಣವಾಗದೇ ಅರೆಮರೆಗಷ್ಟೇ ಉಳಿದಿದ್ದು, ಅತ್ಯಂತ ಕಳಪೆ ಗುಣಮಟ್ಟದಲ್ಲಿ ನಡೆದಿದೆ. ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ರನ್ನಿಂಗ್ ಟ್ರ್ಯಾಕ್, ಲಾಂಗ್ ಜಂಪ್ ವಿಭಾಗಗಳು ತೀವ್ರ ಹಾನಿಗೊಳಗಾಗಿದ್ದು, ಕೆಲವೇ ವರ್ಷಗಳಲ್ಲಿ ಬಿರುಕು ಕಾಣಿಸುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಪಟು, “ಇಲ್ಲಿ ನಾವು ನಿಯಮಿತವಾಗಿ ಅಭ್ಯಾಸ ಮಾಡುವಲ್ಲಿ ಅನೇಕ ಅಡಚಣೆಗಳನ್ನು ಎದುರಿಸುತ್ತಿದ್ದೇವೆ. ಕ್ರೀಡಾಂಗಣದಲ್ಲಿ ಶೌಚಾಲಯದವರೆಗೆ ಇಲ್ಲ. ಮೂಲಭೂತ ಸೌಲಭ್ಯಗಳಿಲ್ಲದೆ ಕ್ರೀಡಾಪಟುಗಳು ಹೇಗೆ ಅಭ್ಯಾಸ ಮಾಡಬೇಕು?” ಎಂದು ಕಳವಳ ವ್ಯಕ್ತಪಡಿಸಿದರು.

ಅವರು ಮುಂದುವರೆದು, “ವಾಸ್ತವದಲ್ಲಿ ಈ ಅಭಿವೃದ್ಧಿ ಕಾಮಗಾರಿಗಳ ಹಿಂದೆ ಕೋಟ್ಯಾಂತರ ರೂಪಾಯಿ ಖರ್ಚಾಗಿದೆಯಂತೆ. ಆದರೆ ಕಾಣಸಿಗುವಷ್ಟು ಕೆಲಸವೂ ಆಗಿಲ್ಲ. ಅರ್ಧಪೂರ್ತಿ ಕೆಲಸ ಮಾಡಿ, ಅಧಿಕಾರಿ-ಗುತ್ತಿಗಾದಾರರು ಹಣವನ್ನು ಲೂಟಿ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳಿವೆ” ಎಂದು ಹೇಳಿದರು.

ಈ ಕುರಿತು ಸ್ಥಳೀಯ ಕ್ರೀಡಾ ಸಂಘಟನೆಯೊಂದು ಕೂಡ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಪೂರ್ಣ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. “ಅನುದಾನ ಸರಿಯಾಗಿ ಬಳಸಿಲ್ಲ. ಇದರ ಸಂಪೂರ್ಣ ತನಿಖೆ ಮಾಡಬೇಕು. ಜಿಲ್ಲೆಯಲ್ಲಿ ಯುವ ಕ್ರೀಡಾಪಟುಗಳಿಗೆ ಪೂರಕ ವಾತಾವರಣ ಒದಗಿಸಲು ನಾವು ಈಗಲಾದರೂ ಎಚ್ಚರವಾಗಬೇಕು” ಎಂಬ ಒತ್ತಾಯ ಹರಿದಾಡುತ್ತಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!