Sat. Nov 29th, 2025

ಮೊದಲು ದಿನವೇ ಕಿಸಾನ್ ಸಮ್ಮಾನ್ ನಿಧಿ ಕಡತಕ್ಕೆ ಸಹಿ,17ನೇ ಕಂತು 20,000 ಕೋಟಿ ರೂ ಹಣ ಬಿಡುಗಡೆ.

ಮೊದಲು ದಿನವೇ ಕಿಸಾನ್ ಸಮ್ಮಾನ್ ನಿಧಿ ಕಡತಕ್ಕೆ ಸಹಿ,17ನೇ ಕಂತು 20,000 ಕೋಟಿ ರೂ ಹಣ ಬಿಡುಗಡೆ.
  • ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 17ನೇ ಕಂತಿನ ಹಣ ಬಿಡುಗಡೆ ಆಗಿದೆ. ಪ್ರಧಾನಿಗಳು ಇಂದು ಸೋಮವಾರ (ಜೂನ್ 10) ಒಟ್ಟು 20,000 ಕೋಟಿ ರೂ ಹಣ ಬಿಡುಗಡೆ ಮಾಡಲು ಕಡತಕ್ಕೆ ಸಹಿಹಾಕಿದ್ದಾರೆ. 
  • ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ತೆಗೆದುಕೊಂಡ ಮೊದಲ ಕ್ರಮ ಇದು. ಒಂಬತ್ತು ಕೋಟಿಗೂ ಹೆಚ್ಚು ಸಂಖ್ಯೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2,000 ರೂ ಹಣ ಜಮೆ ಆಗಲಿದೆ.

ಜೂನ್ 10: ರೈತರಿಗೆ ವ್ಯವಸಾಯಕ್ಕೆ ಧನಸಹಾಯವಾಗುವ ಪಿಎಂ ಕಿಸಾನ್ ಯೋಜನೆಯಲ್ಲಿ (17ನೇ ಕಂತಿನ ಹಣ ಬಿಡುಗಡೆ ಆಗಿದೆ. ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಕೈಗೊಂಡ ಮೊದಲ ಕ್ರಮ ಇದು ಎಂಬುದು ವಿಶೇಷ. ಇಂದು ಪ್ರಧಾನಿಗಳು ಪಿಎಂ ಕಿಸಾನ್ ನಿಧಿಯ ಹಣ ವಿಲೇವಾರಿ ಕಡತಕ್ಕೆ ಸಹಿಹಾಕಿದ್ದಾರೆ. ಇದರೊಂದಿಗೆ 9.3 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ 17ನೇ ಕಂತಿನ ಹಣವಾದ 2,000 ಕೋಟಿ ರೂ ಜಮೆಯಾಗಲಿದೆ. ಸರ್ಕಾರ ಒಟ್ಟು 20,000 ಕೋಟಿ ರೂ ಹಣವನ್ನು ಬಿಡುಗಡೆ ಮಾಡಿದೆ.

ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯಾ ಎಂದು ಖಾತ್ರಿಪಡಿಸಿಕೊಳ್ಳಿ. ಕೆಲವೊಮ್ಮೆ ಖಾತೆಗೆ ಹಣ ಜಮೆ ಆಗಲು ಒಂದು ವಾರದವರೆಗೂ ಸಮಯ ಆಗಬಹುದು. ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನೀವಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕ್ರಮ ಅನುಸರಿಸಿ:

  • ಪಿಎಂ ಕಿಸಾನ್ ಯೋಜನೆಯ ವೆಬ್​ಸೈಟ್​ಗೆ ಹೋಗಿ: pmkisan.gov.in/
  • ಇಲ್ಲಿ ಕೆಳಗೆ ತುಸು ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣಬಹುದು. ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ
  • ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರನ್ನು ಆಯ್ದುಕೊಳ್ಳಿ.
  • ನಿಮ್ಮ ಊರಿನಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ. ಇದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

Related Post

Leave a Reply

Your email address will not be published. Required fields are marked *

error: Content is protected !!