ರಾಯಚೂರು, ಜುಲೈ ೧೨:
ಸೇತುವೆ ಮಾರ್ಗದಿಂದ ತೆರಳಿದ್ದ ನವದಂಪತಿ ಫೋಟೊ ತೆಗೆಸಿಕೊಳ್ಳಲು ನಿಂತಿದ್ದರು. ಮೊದಲು ಪತ್ನಿಯ ಫೋಟೊ ತೆಗೆದ ಪತಿ ಬಳಿಕ ತನ್ನ ಫೋಟೊ ತೆಗೆಯಲು ಪತ್ನಿಗೆ ಹೇಳಿದ್ದಾನೆ. ಸೇತುವೆ ತುದಿಗೆ ನಿಲ್ಲಿಸಿದ ಪತ್ನಿ ಫೋಟೊ ತೆಗೆಯುವ ನೆಪದಲ್ಲಿ ನದಿಗೆ ನೂಕಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ. ನದಿಯಲ್ಲಿ ಈಜಿಕೊಂಡು ಹೋಗಿ ಕಲ್ಲು ಬಂಡೆಯಲ್ಲಿ ಕುಳಿತುಕೊಂಡ ಪತಿ ರಕ್ಷಣೆಗಾಗಿ ಜೋರಾಗಿ ಕೂಗುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಹಗ್ಗದ ನೆರವಿನೊಂದಿಗೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಈ ದಂಪತಿ ಎಲ್ಲಿಯವರು, ಘಟನೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ.ಪತ್ನಿಯೇ ನನ್ನನ್ನು ನದಿಗೆ ನೂಕಿದ್ದಾಳೆ ಎಂದು ಪತಿ ಆರೋಪಿಸಿದ್ದು, ಘಟನೆ ಬಗ್ಗೆ ಇನ್ನೂ ವಿವರಣೆ ಸಿಕ್ಕಿಲ್ಲ. ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದೆ. ಸೇತುವೆಯ ಬಳಿ ನೀರಿನಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದ್ದು, ಅದೃಷ್ಟವಶಾತ್ ಆತ ಪ್ರಾಣ ಉಳಿಸಿಕೊಂಡು ಬಂದಿದ್ದಾನೆ