Mon. Dec 1st, 2025

5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ಪ್ರಕಟ

5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಡಿ ೨೭:  ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5, 8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧರಿಸಿರುವ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಶೈಕ್ಷಣಿಕ ವರ್ಷ 2023-24ರಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸನ್ನದ್ದವಾಗಿರುವ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ 2024ರ ಮಾರ್ಚ್ ನಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲು ಯೋಜಿಸಿದೆ. ವೇಳಾಪಟ್ಟಿಯ ಪ್ರಕಾರ, ಮಾರ್ಚ್ 11 ರಿಂದ 18 ರವರೆಗೆ ಪಬ್ಲಿಕ್ ಪರೀಕ್ಷೆ ನಡೆಯಲಿದೆ. ಹೀಗಾಗಿ ಪರೀಕ್ಷೆಗೆ ಸಜ್ಜಾಗುವಂತೆ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯಿಂದ ಸೂಚನೆ ನೀಡಿದೆ.

ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಬಗ್ಗೆ ಅಧಿಕೃತ ವೆಬ್‌ಸೈಟ್‌ನಲ್ಲೂ ಕಾಣಬಹುದು. ಗಮನಾರ್ಹವಾಗಿ,  5, 8 ಮತ್ತು 9ನೇ ತರಗತಿಗಳಿಗಾಗಿ ನಡೆಯಲಿರುವ ಪಬ್ಲಿಕ್ ಪರೀಕ್ಷೆಗೆ ಈ ಬಾರಿ ಪರೀಕ್ಷಾ ಮಂಡಳಿಯೇ ಪ್ರಶ್ನೆ ಪತ್ರಿಕೆ ಸಿದ್ದಪಡಿಸಲಿದೆ.

5, 8, 9ನೇ ತರಗತಿಗಳಿಗಾಗಿ ಪಬ್ಲಿಕ್ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಕಂಡಂತಿದೆ

  • 5 ನೇ ತರಗತಿ ಪಬ್ಲಿಕ್ ಪರೀಕ್ಷಾ ವೇಳಾ ಪಟ್ಟಿ ದಿನಾಂಕ ಮತ್ತು ಸಮಯ:
    ಮಾ.11- ಪ್ರಥಮ ಭಾಷೆ ಕನ್ನಡ
    ಮಾ.12 ದ್ವಿತೀಯ ಭಾಷೆ ಇಂಗ್ಲಿಷ್
    ಮಾ.13 ಪರಿಸರ ಅಧ್ಯಯನ
    ಮಾ.14ರಂದು ಗಣಿತ ಪರೀಕ್ಷೆ ನಡೆಯಲಿದೆ.
    ಈ ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ 4.30ರ ವರೆಗೆ ನಡೆಯಲಿವೆ.
  • 8-9 ನೇ ತರಗತಿ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ಮತ್ತು ಸಮಯ
    ಮಾ.11 ಪ್ರಥಮ ಭಾಷೆ ಕನ್ನಡ,
    ಮಾ.12 ದ್ವಿತೀಯ ಭಾಷೆ ಇಂಗ್ಲಿಷ್
    ಮಾ.13 ತೃತೀಯ ಭಾಷೆ ಹಿಂದಿ
    ಮಾ.14 ಗಣಿತ
    ಮಾ.15 ವಿಜ್ಞಾನ
    ಮಾ.16 ಸಮಾಜ ವಿಜ್ಞಾನ
    ಮಾ.18ರಂದು ದೈಹಿಕ ಶಿಕ್ಷಣ
    ಈ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ.

ಎಲ್ಲ ವಿದ್ಯಾರ್ಥಿಗಳಿಗೆ ಆಯಾ ಶಾಲಾ ಹಂತದಲ್ಲಿಯೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ತಾಲ್ಲೂಕು ಹಂತದಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ. ಆದರೆ, ಮಂಡಳಿಯಿಂದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಬಿಇಒ ಗಳಿಗೆ ಕಳುಹಿಸಲಾಗುತ್ತದೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮಗೆ ಅವಶ್ಯವಿರುವಷ್ಟು ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿಕೊಂಡು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ವಿತರಣೆ ಮಾಡಲಿದ್ದಾರೆ .

Related Post

Leave a Reply

Your email address will not be published. Required fields are marked *

error: Content is protected !!