ನಟ ದರ್ಶನ್ ಮೇಲಿನ ಅಭಿಮಾನದ ಹುಚ್ಚಿನಿಂದಾಗಿ ಅಭಿಮಾನಿಯೊಬ್ಬ ತಾನು ಹೆತ್ತ ಮಗುವನ್ನೇ ಕೈದಿ ಮಾಡಿ ಹಾಕಿದ್ದಾನೆ , ಇದು ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್. ಮಗುವಿಗೆ ಪರಪ್ಪನ ಅಗ್ರಹಾರದ ಕೈದಿಯಂತೆ ಫೋಟೋ ಶೂಟ್ ಮಾಡಿಸಿದ್ದಾನೆ .
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ನ ಅಭಿಮಾನಿಗಳು ದಿನಕ್ಕೊಂದು ಅವತಾರ ತೋರುತ್ತಿದ್ದಾರೆ. ಇದೀಗ ಒಂದು ವರ್ಷದ ಮಗುವಿಗೆ ಜೈಲು ಕೈದಿಯ ರೀತಿ ಬಿಳಿ ಬಟ್ಟೆ ಹಾಕಿಸಿ ಈತ ಫೋಟೋ ಶೂಟ್ ಮಾಡಿಸಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಮಗುವಿಗೆ ದರ್ಶನ್‌ಗೆ ಕೊಡಲಾದ ಕೈದಿ ನಂಬರ್ ನೀಡಿದ್ದಾನೆ. ಕೈ ಕೋಳದ ಮಾದರಿ, ಕೈದಿಗಳ ರೀತಿ ಬಿಳಿ ಬಟ್ಟೆ ಹಾಕಿಸಿದ್ದಾನೆ.
‘Brand of sandalhood dboss fans Mysore’ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಫೋಟೋ ಹಂಚಿಕೊಳ್ಳಲಾಗಿದೆ. ಒಂದು ವರ್ಷದ ಮಗವಿಗೆ ಖೈದಿ ರೀತಿಯ ಬಟ್ಟೆ ಹಾಕಿ ಪೋಟೋಶೂಟ್ ಮಾಡಿಸಲಾಗಿದೆ. ದರ್ಶನ್‌ಗೆ ನೀಡಿರೋ ವಿಚಾರಾಣಧೀನ ಖೈದಿ ಸಂಖ್ಯೆಯನ್ನು ಮಗುವಿಗೆ ಹಾಕಲಾಗಿದೆ. ಕೈ ಕೋಳ ಮಾದರಿ ಕೂಡ ಇಡಲಾಗಿದೆ. ಅಲ್ಲಿಯೇ ‘ಜೈ ಡಿಬಾಸ್’ ಎಂದು ಬರೆಯಲಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಜನಸಾಮಾನ್ಯರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.