ಯಾದಗಿರಿ, ಫೆಬ್ರವರಿ 10:
ಈ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಹನುಮಂತ ಮೋಟನಳ್ಳಿ, ತಾಲೂಕು ಅಧ್ಯಕ್ಷ ಭೀಮರಾಯ ಹತ್ತಿಕುಣಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಕಾರ್ಮಿಕರ ಹಿತಾಸಕ್ತಿಗಳನ್ನು ಮುಂದಿರಿಸಿ ವಿವಿಧ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಪದಾಧಿಕಾರಿಗಳೆಲ್ಲರೂ ನೂತನ ಪ್ರಧಾನ ಕಾರ್ಯದರ್ಶಿಯ ನೇಮಕವನ್ನು ಹರ್ಷದಿಂದ ಸ್ವಾಗತಿಸಿ, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಕಟ್ಟುನಿಟ್ಟಿನ ಕಾರ್ಯವೈಖರಿ ವಹಿಸುವಂತೆ ಆಶಯ ವ್ಯಕ್ತಪಡಿಸಿದರು.
ನೂತನ ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ ವಡಗೇರಿ, ತಮ್ಮ ಸೇವಾ ಅವಧಿಯಲ್ಲಿ ಕಾರ್ಮಿಕ ಕಲ್ಯಾಣ ಹಾಗೂ ಹಕ್ಕುಗಳ ಹೋರಾಟಕ್ಕೆ ಸಂಪೂರ್ಣ ತೊಡಗಿಕೊಳ್ಳುವ ನಿಶ್ಚಯ ವ್ಯಕ್ತಪಡಿಸಿದರು.