ಯಾದಗಿರಿ ಜ ೨೬: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪ್ರಪಂಚದಾದ್ಯಂತ ದೇಶಗಳ ಸಂವಿಧಾನಗಳನ್ನು ಓದಿ, ತಿಳಿದು ವಿಭಿನ್ನ ಹಾಗೂ ವಿಶಿಷ್ಟ ಮಾನವೀಯತೆ ಹಾಗೂ ಪ್ರತಿಯೊಬ್ಬರಿಗೂ ಒಂದೇ ಕಾನೂನು ಒಂದೇ ನ್ಯಾಯದ ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡಿದ ಮಾಹಾ ಕೊಡುಗೆ ಅದುವೇ” ಭಾರತೀಯ ಸಂವಿಧಾನ” ವಾಗಿದೆ ಎಂದು ಕರ‍್ಯ ನರ‍್ವಾಹಕ ಅಭಿಯಂತರ ರಾಘವೇಂದ್ರ ಡಿ. ಹೇಳಿದರು.
ಸೋಮವಾರ ನಗರದಲ್ಲಿನ ಕರ‍್ಯ ಮತ್ತು ಪಾಲನೆ ವಿಭಾಗ ಕಚೇರಿ ಆವರಣದಲ್ಲಿ ೭೭ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು,ಭಾರತ ಸಂವಿಧಾನವು ಲಿಖಿತ ರೂಪದಲ್ಲಿ ವಿಶ್ವದ ಅತ್ಯಂತ ವಿಶಾಲವಾದ ಮತ್ತು ಶ್ರೇಷ್ಠತೆಯನ್ನು ಪಡೆದಂತಹ ಮಾನವೀಯತೆಯ ಏಕೈಕ ಸಂವಿಧಾನವಾಗಿದ್ದು, ಒಂದೇ ನ್ಯಾಯ, ಸ್ವತಂತ್ರ, ಸಮಾನತೆ, ಮತ್ತು ಮೂಲಭೂತ ಹಕ್ಕುಗಳನ್ನು ಭಾರತದ ಪ್ರತಿ ಪ್ರಜೆಗಳಿಗೆ ನೀಡುವ ಸಂವಿಧಾನವಾಗಿ ೧೯೫೦ ಜನವರಿ ೨೬ ಜಾರಿಗೆ ಬಂದ ದಿನವನ್ನು ಇಂದು ನಾವು ಗಣರಾಜ್ಯೋತ್ಸವವಾಗಿ ಆಚರಣೆಯನ್ನು ಮಾಡುತ್ತೇವೆ ಎಂದರು.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಪ್ರತಿ ಭಾರತೀಯನಿಗೆ ಒಂದೇ ರೀತಿಯ ಕಾನೂನು, ಹಾಗೂ ಒಂದೇ ರೀತಿಯ ಸಮಾನ ಹಕ್ಕುಗಳು ನೀಡುವ ಸಂವಿಧಾನವಾಗಿದೆ ಎಂದರು.
ಈ ಸಂರ‍್ಭದಲ್ಲಿ
ಸಹಾಯಕ ಕರ‍್ಯ ನರ‍್ವಾಹಕ ಅಭಿಯಂತರರು ಗಳಾದ ಸಂಜು ಕುಮಾರ್, ಅಂಬರೀಷ್, ಜರಿನಾ ಬೇಗಂ, ಮಾಣಿಕ್ ರಾವ್ ಕುಲರ‍್ಣಿ, ಲೆಕ್ಕಾಧಿಕಾರಿ ಅಶೋಕ್ ಕುಮಾರ್,ಬಸವರಾಜ್, ಜೇಸ್ಕಾಂ ಜಾಗೃತದಳದ ಪೊಲೀಸ್ ಇನ್ಸ್ಪೆಕ್ಟರ್ ಭೀಮರತ್ನ ಸಜ್ಜನ್, ಪಿ ಎಸ್ ಐ.ರಾಮುಲು, ಸೇರಿದಂತೆ ಜೇಸ್ಕಾಂ ಸಿಬ್ಬಂದಿ, ಹಾಗೂ ಜೇಸ್ಕಾಂ ಜಾಗೃತ ದಳದ ಸಿಬ್ಬಂದಿಗಳು ಇದ್ದರು.

