ಯಾದಗಿರಿ, ಜುಲೈ 31: ಬೆಂಗಳೂರಿನಲ್ಲಿ ಮೃತಪಟ್ಟ ಯಾದಗಿರಿ ಮತಕ್ಷೇತ್ರದ ಕುರಕುಂದಾ ಗ್ರಾಮದ ಚಾಂದಪಾಶಾ ಅವರ ಮಕ್ಕಳ ಸಾವು ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ಅವರು ಬುಧವಾರ ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳ ಅಂತಿಮ ನಮನ ಸಲ್ಲಿಸಿದರು ಹಾಗೂ ಪೀಡಿತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಶಾಸಕರು ಮಗುವನ್ನು ಕಳೆದುಕೊಂಡ ಹೆತ್ತವರ ದುಃಖವನ್ನು ಹಂಚಿಕೊಂಡು, “ಚಿಕ್ಕ ಮಕ್ಕಳ ಸಾವು ಹೃದಯವಿದ್ರಾವಕ. ಮಕ್ಕಳು ಹೆತ್ತವರ ಮುಂದೆ ಸಾಯಬಾರದು. ಈ ನೋವು ಯಾರಿಗೂ ಬರಬಾರದು. ಧೈರ್ಯದಿಂದ ಮುಂದಿನ ಜೀವನ ಸಾಗಿಸಬೇಕು” ಎಂದು ಹೇಳಿದರು.
ಮೃತ ಮಕ್ಕಳ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ ಶಾಸಕರು, “ನಾನು ನೀಡುವ ಸಹಾಯ ಅಷ್ಟೊಂದು ದೊಡ್ಡದಾಗಿಲ್ಲ. ಆದರೆ ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಹೆಚ್ಚಿನ ನೆರವು ಒದಗಿಸಲು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
ಈ ವೇಳೆ ಕಾಸೀಂ ಮುತ್ತ್ಯಾ, ಡಾ. ರಾಜು ಬೆಳಗೇರಿ, ಕಾಶೀಮ್ ಗುಲಾಮಿ, ಮಕಧುಮ್, ಶರಣಬಸವ ಕುರಕುಂದಿ, ಮೆಹಬೂಬ್, ಶರಣ ಗೌಡ, ಬಸನಗೌಡ, ಅಂಬ್ರೆಷ್, ರಫಿ ಬೆಳಗೇರಿ, ಮೋಸಪ್ಪಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

