Wed. Feb 11th, 2026

ಕರವೇ ಯಾದಗಿರಿ ಜಿಲ್ಲಾ ಘಟಕಕ್ಕೆ ಹೊಸ ಪದಾಧಿಕಾರಿಗಳ ನೇಮಕ

ಕರವೇ ಯಾದಗಿರಿ ಜಿಲ್ಲಾ ಘಟಕಕ್ಕೆ ಹೊಸ ಪದಾಧಿಕಾರಿಗಳ ನೇಮಕ

ಯಾದಗಿರಿ ಅ ೦೮: ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ವಿವಿಧ ಹುದ್ದೆಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಾಗಪ್ಪ ಅವರನ್ನು ಜಿಲ್ಲಾ ಸಹ ಕಾರ್ಯದರ್ಶಿಯಾಗಿ, ಚನ್ನಾರೆಡ್ಡಿ ನಾಯಕರನ್ನು ಜಿಲ್ಲಾ ಗೌರವಾಧ್ಯಕ್ಷರಾಗಿ, ಅನಿಲ್ ಕುಮಾರರನ್ನು ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ, ಸುರೇಶರನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ರಾಮಕೃಷ್ಣರನ್ನು ಸಂಘಟನಾ ಕಾರ್ಯದರ್ಶಿಯಾಗಿ, ಶರಣಪ್ಪರನ್ನು ಜಿಲ್ಲಾ ಸಂಚಾಲಕರಾಗಿ, ಮಾನಯ್ಯ ಗಾಳೆನೋರರನ್ನು ಜಿಲ್ಲಾ ವಕ್ತಾರರಾಗಿ, ನಾಗೇಶರನ್ನು ಜಿಲ್ಲಾ ಸಹ ಕಾರ್ಯದರ್ಶಿಯಾಗಿ, ಚಂದ್ರಶೇಖರ ಎನ್. ವಗ್ಗನ್ ಅವರನ್ನು ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಹಾಗೂ ರಮೇಶರನ್ನು ಜಿಲ್ಲಾ ಸಂಚಾಲಕರಾಗಿ ನೇಮಕ ಮಾಡಲಾಗಿದೆ.

ಈ ಕುರಿತು ನೇಮಕ ಆದೇಶ ಹೊರಡಿಸಿರುವ ಜಿಲ್ಲಾಧ್ಯಕ್ಷ ನಾಗಪ್ಪ ಹೊನಗೇರಾ ಅವರು, ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳು ಕೂಡಲೇ ತಮ್ಮ ತಮ್ಮ ಹುದ್ದೆಗಳ ಪದಭಾರ ವಹಿಸಿಕೊಂಡು ಯಾದಗಿರಿ ಜಿಲ್ಲೆಯಲ್ಲಿ ವೇದಿಕೆಯ ಧ್ಯೇಯೋದ್ದೇಶಗಳನ್ನು ಈಡೇರಿಸಲು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಸಂಘಟನೆಯ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು ಹಾಗೂ ನಾಡು, ನುಡಿ, ನೆಲ, ಜಲದ ರಕ್ಷಣೆಗೆ ಸದಾ ತೊಡಗಿಸಿಕೊಳ್ಳಬೇಕು ಎಂದು ನೇಮಕ ಪತ್ರದಲ್ಲಿ ತಿಳಿಸಿದ್ದಾರೆ. ಕನ್ನಡ ರಕ್ಷಣಾ ವೇದಿಕೆಯ ಚಟುವಟಿಕೆಗಳು ಜಿಲ್ಲಾದ್ಯಂತ ಮತ್ತಷ್ಟು ಬಲಪಡಿಸಲಿದ್ದು, ಯುವಕರ ಭಾಗವಹಿಸುವಿಕೆಯಿಂದ ಸಂಘಟನೆಯ ಬಲ ಮತ್ತು ಪ್ರಭಾವ ವೃದ್ಧಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Related Post

Leave a Reply

Your email address will not be published. Required fields are marked *

error: Content is protected !!