ಮಾ ೨೦:-
ಮೋಸ ಮತ್ತು ಅತ್ಯಾಚಾರ
ಮಾಳಿಂಗರಾಯ ಪೂಜಾರಿ ಎಂಬಾತ, ಮಹಿಳೆಗೆ ಮದುವೆ ಮಾಡಿ ಬಾಳು ಕೊಡುತ್ತೇನೆ ಎಂದು ಸುಳ್ಳು ಭರವಸೆ ನೀಡಿ, ಆಕೆಯ ಮೇಲೆ ಅನಾಹುತ ಎಸಗಿದ. ಇದಕ್ಕೆ ಸೀಮಿತವಲ್ಲದೆ, ಆಕೆಯ ಹೆಸರಿನಲ್ಲಿದ್ದ ಆಸ್ತಿ-ಪಾಸ್ತಿಗಳನ್ನು ತನ್ನ ಹೆಸರಿಗೆ ಬರೆಸಿಸಿಕೊಂಡು, ಆಕೆಯನ್ನು ಸಂಪೂರ್ಣವಾಗಿ ಮೋಸಗೊಳಿಸಿದ್ದಾನೆ. ಈ ಕೃತ್ಯದ ಕುರಿತು ಮಹಿಳೆ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಪೊಲೀಸರ ನಿರ್ಲಕ್ಷ್ಯ, ಮಹಿಳೆಗೆ ನ್ಯಾಯವಿಲ್ಲ
ಮಹಿಳೆಯ ದೂರು ದಾಖಲಾಗಿದ್ದರೂ, ಆರೋಪಿಯ ಬಂಧನಕ್ಕಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದು ಪೊಲೀಸರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಹಲವಾರು ಬಾರಿ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಅಳಲು ತೊಂಡಿಕೊಂಡಿದ್ದರೂ, ಸುವರ್ಣ (ಬದಲಾಯಿಸಿದ ಹೆಸರು) ನ್ಯಾಯ ದೊರಕದೆ ಇದ್ದದ್ದು ಆಕೆಗೆ ಮತ್ತಷ್ಟು ನೋವು ಉಂಟುಮಾಡಿದೆ.
ಆತ್ಮಹತ್ಯೆಗೆ ಯತ್ನಿಸಿದ ಸುವರ್ಣ
ನ್ಯಾಯ ಸಿಗದಿದ್ದರೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸಿದ್ದ ಸುವರ್ಣ, ಕೊನೆಗೂ ಯಾದಗಿರಿ ಎಸ್‌ಪಿ ಕಚೇರಿ ಮುಂದೆ ಆತ್ಮಹತ್ಯೆ ಯತ್ನಿಸಿದರು. ತನ್ನ ಜೀವನವನ್ನೇ ಮುಗಿಸಲು ಸಿದ್ಧರಾಗಿದ್ದ ಮಹಿಳೆಯ ಕಣ್ಣೀರಿಗೆ ನ್ಯಾಯ ಸಿಗದ ಸ್ಥಿತಿಯು, ಸಮಾಜದ ತಲೆ ತಗ್ಗಿಸುವಂತಹ ಘಟನೆ.
ಮತ್ತಷ್ಟು ಜನರಿಗೆ ಮೋಸದ ಶಂಕೆ
ಮಾಳಿಂಗರಾಯ ಪೂಜಾರಿ ಬಣ್ಣ ಬಣ್ಣದ ಮಾತುಗಳ ಮೂಲಕ ಇನ್ನೂ ಹಲವಾರು ಮಹಿಳೆಯರನ್ನು ಮೋಸಗೊಳಿಸಿರುವ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಈ ಕೀರಾತಕನನ್ನು ಶೀಘ್ರವೇ ಬಂಧಿಸಬೇಕು ಎಂಬ ಒತ್ತಾಯ ಎಲ್ಲಾ ಮಟ್ಟಗಳಿಂದ ಕೇಳಿ ಬರುತ್ತಿದೆ.
ನ್ಯಾಯಕ್ಕಾಗಿ ಕಾದಿರುವ ಸುವರ್ಣ
ಅವನ ಬಂಧನ ಮತ್ತು ಆಸ್ತಿಯನ್ನು ವಾಪಸ್ ಪಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಸಂತ್ರಸ್ಥ ಮಹಿಳೆಗೆ ನ್ಯಾಯ ಒದಗಿಸದೆ ಇನ್ನು ಮುಂದೆ ಹಲವಾರು ಮೂಕರೋಧನೆಗಳನ್ನು ಸುಮ್ಮನಾಗಿಸಬಾರದು. ಇದೀಗ ಕೀರಾತಕನಿಗೆ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯ ಜನಮಟ್ಟದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ.