Tue. Jul 22nd, 2025

ಕಲಬುರಗಿ: ಅಣಕು ಮರ್ಡರ್ ರೀಲ್ ಮಾಡಿ ವೈರಲ್: ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು

ಕಲಬುರಗಿ: ಅಣಕು ಮರ್ಡರ್ ರೀಲ್ ಮಾಡಿ ವೈರಲ್: ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು

ಮಾ. 18:

ಕಲಬುರಗಿಯಲ್ಲಿ ಸ್ಫೋಟಕ ಸನ್ನಿವೇಶವನ್ನು ಸೃಷ್ಟಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಹುಮನಾಬಾದ್ ರಿಂಗ್ ರೋಡ್ ಬಳಿಯ ರಸ್ತೆ ಮಧ್ಯೆ ವ್ಯಕ್ತಿಯೊಬ್ಬನ ತಲೆಗೆ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡುತ್ತಿರುವಂತೆ ವಿಕ್ಷಿಪ್ತ ‘ಅಣಕು ಮರ್ಡರ್’ ರೀಲ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಈ ರೀಲ್‌ ಸೃಷ್ಟಿಯಲ್ಲಿ ಪಾಲ್ಗೊಂಡ ವ್ಯಕ್ತಿಗಳ ಪತ್ತೆಗೆ ಸಬ್-ಅರ್ಬನ್ ಠಾಣೆ ಪೊಲೀಸರು ಮುಂದಾಗಿದ್ದಾರೆ.

ಟಿವಿ ಸ್ಟೇಷನ್ ಸಮೀಪದ ರಿಂಗ್ ರೋಡ್ ಬಳಿ ದೃಶ್ಯ:
ನಗರದ ಟಿವಿ ಸ್ಟೇಷನ್ ಸಮೀಪದ ಹುಮನಾಬಾದ್ ರಿಂಗ್ ರೋಡ್ ಬಳಿಯ ರಸ್ತೆಯೊಂದರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಕಿಡಿಗೇಡಿಗಳು ತಾವು ಚಿತ್ರೀಕರಿಸಿದ ವಿಡಿಯೋ ತುಣುಕನ್ನು ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ವಿಡಿಯೋ ತುಣುಕು ಜನಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಪೊಲೀಸರು ಕೂಡಾ ಈ ವಿಡಿಯೋ ತಲುಪಿದ ತಕ್ಷಣಲೇ ಎಚ್ಚರಿಕೆಯಿಂದ ಕ್ರಮ ಕೈಗೊಂಡಿದ್ದಾರೆ.

ಮರ್ಡರ್ ಮಾಡಿದಂತೆ ನಟಿಸಿದ ಯುವಕ:
ಮೊಳ ಉದ್ದದ ಕೂದಲು ಬಿಟ್ಟ ಯುವಕನೊಬ್ಬ ತನ್ನ ಮುಖದ ಮೇಲೆ ಕೂದಲು ಹರಡಿಸಿಕೊಂಡು, ಕೈಯಲ್ಲಿರುವ ಸುತ್ತಿಗೆಯಿಂದ ಭೀಕರವಾಗಿ ಕೊಲೆ ಮಾಡಿದಂತೆ ನಟಿಸುತ್ತಿದ್ದಾನೆ. ಬಳಿಕ ವಿಕಾರವಾಗಿ ಚೀರುತ್ತಿರುವ ವಿಡಿಯೋ ತುಣುಕು ಎಲ್ಲೆಡೆ ಹರಿದಾಡಲು ಆರಂಭಿಸುತ್ತಿದ್ದಂತೆಯೇ ಪೊಲೀಸರು ತಕ್ಷಣ ಈ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಅಣಕು ಮರ್ಡರ್ ಸತ್ಯಾಸತ್ಯತೆ:
ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿದಾಗ, ಇದು ನಿಜವಾದ ಕೊಲೆ ಅಲ್ಲ, ಬದಲಿಗೆ ಅಣಕು ಮರ್ಡರ್ ದೃಶ್ಯ ಎಂಬುದು ಖಾತ್ರಿಪಡಿಸಲಾಗಿದೆ. ಆದರೂ, ಈ ರೀತಿಯ ವಿಡಿಯೋ ತುಣುಕು ಸಾರ್ವಜನಿಕರಲ್ಲಿ ಭಯ ಮತ್ತು ಗೊಂದಲ ಮೂಡಿಸುತ್ತಿದ್ದರಿಂದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಬ್-ಅರ್ಬನ್ ಠಾಣೆ ಪೊಲೀಸರು ಮುಂದಾಗಿದ್ದಾರೆ.

ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು:
ಈ ರೀಲ್‌ ಸೃಷ್ಟಿಸಿದ ಮತ್ತು ವೈರಲ್ ಮಾಡಿದ ಯುವಕನ ಬಗ್ಗೆ ಮಾಹಿತಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ವಿಡಿಯೋ ತುಣುಕಿನ ಮೂಲ ಪತ್ತೆ ಹಚ್ಚಲು ಪೊಲೀಸ್ ಇಲಾಖೆ ತೀವ್ರ ಶ್ರಮ ಪಡುತ್ತಿದ್ದು, ಶೀಘ್ರದಲ್ಲೇ ಈ ಕೃತ್ಯದ ಹಿಂದೆ ಇರುವವರನ್ನು ಬಂಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!