ಯಾದಗಿರಿ : ಕರಾವಳಿ ಬಳಿಕ ಇದೀಗ ಯಾದಗಿರಿಯಲ್ಲಿ ಅನೈತಿಕ ಪೊಲೀಸ್ ಗಿರಿ
ಅನ್ಯ ಕೋಮಿನ ಯುವತಿ ಜೊತೆ ಪ್ರೀತಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ,ಯುವಕನನ್ನ ಮನಬಂದಂತೆ ಥಳಿಸಿದ ಭಜರಂಗದಳ ಸಂಘಟನೆ ಮುಖಂಡರು..
ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವಕ ಕಾಲೇಜಿನಿಂದ ವಾಪಸ್ ಬರುವಾಗ ಒಂಭತ್ತು ಜನರ ಗುಂಪು ಯುವಕನನ್ನು ಅಪಹರಿಸಿ ಸತತ ಐದು ಗಂಟೆಗಳ ಕಾಲ ರೂಮ್ ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಯಾದಗಿರಿ ನಗರದ ಗೋಗಿ ಮೊಹಲ್ಲಾ ನಿವಾಸಿ ವಾಹಿದ್ ಎಂಬ ಯುವಕನ ಮೇಲೆ ಹಲ್ಲೆ,
ಹೊಟ್ಟೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ ಗ್ಯಾಂಗ್,ತಪ್ಪಾಗಿದೆ ಅಂತ ಕಾಲಿಗೆ ಬಿದ್ದು ಜೀವ ಉಳಿಸಿಕೊಂಡು ಬಂದ ಯುವಕ..
ಯುವತಿಗೆ ಹಾಗೂ ಹಲ್ಲೆ ಮಾಡಿದ ಗ್ಯಾಂಗ್ ಯಾವುದೇ ಸಂಬಂಧವಿಲ್ಲ,ಅನ್ಯ ಕೋಮಿನ ಯುವಕ ಆಗಿದ್ದಕ್ಕೆ ಹಲ್ಲೆ ಮಾಡಿದ ಭಜರಂಗದಳದ ಮುಖಂಡರು..
ಶಿವಕುಮಾರ್,ತಾಯಪ್ಪ,ಮಲ್ಲು,ಅಂಬರೀಶ್ ಸೇರಿ 9 ಜನರಿಂದ ಹಲ್ಲೆ,ಯಾದಗಿರಿ ನಗರ ಠಾಣೆಯಲ್ಲಿ ಒಂಬತ್ತು ಜನರ ವಿರುದ್ಧ ದೂರು ದಾಖಲು..
143,147,148,307,323,341,342,363,504 ಹಾಗೂ 506 ಕಲಂ ಅಡಿ ಕೇಸ್ ದಾಖಲು,ಕೇಸ್ ದಾಖಲಾಗುತ್ತಿದ್ದ ಹಾಗೆ ತಲೆ ಮರಿಸಿಕೊಂಡ ಆರೋಪಿಗಳು..