ಆ ೨೩:
ಮುಡಾ ಹಗರಣವು ಸಿಎಂ ಸಿದ್ದರಾಮಯ್ಯಗೆ ತೊಂದರೆ ಉಂಟುಮಾಡಲಿದೆಯೇ ಎಂಬ ಅನುಮಾನ ಈಗ ಭಾರಿ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಪೂಜಾರಿ ಭವಿಷ್ಯವಾಣಿಯಂತೆ, ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ.
ಇದಕ್ಕೂ ಮೊದಲು, 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಪೂಜಾರಿ ಭವಿಷ್ಯ ನುಡಿದಿದ್ದು, ಅದು ನಿಜವಾಗಿತ್ತು. ಅದರಲ್ಲಿ ಅವರ ಭವಿಷ್ಯವಾಣಿ ಈಗ ಮತ್ತೊಮ್ಮೆ ಸಿದ್ದವಾಗಲಿದೆ ಎಂಬ ವಾದವು ಪ್ರಸಾರವಾಗುತ್ತಿದೆ.
ಅಮ್ಮ (ದೇವಿ) ಕನಸಿನಲ್ಲಿ ಬಂದು 9 ಜನ ಸಿಎಂ ಸ್ಥಾನದ ಆಕಾಂಕ್ಷಿಗಳು ಎಂದು ತಿಳಿಸಿದ್ದಳು. ಕೊನೆಗೆ, ಸಿದ್ದರಾಮಯ್ಯ ಮೊದಲ ಅವಧಿಗೆ ಸಿಎಂ ಆಗಲಿದ್ದು, ಎರಡನೇ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಆಗುವ ಕಾಲ ಬಂದಿದೆ ಎಂದು ಪೂಜಾರಿ ನುಡಿದರು.
ಕೇಂದ್ರ ರಾಜಕೀಯದ ಕುರಿತು, ಮೋದಿ ಸರ್ಕಾರವು ಮುಂದಿನ ಐದು ವರ್ಷಗಳೊಳಗೆ ಪತನವಾಗಲಿದೆ ಎಂದು ಪೂಜಾರಿ ಭವಿಷ್ಯವಾಣಿ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರು ಗಡೇ ದುರ್ಗಾದೇವಿ ಪರಮಭಕ್ತರಾಗಿದ್ದು, ದೇವಿಯ ಕೃಪೆಯಿಂದ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಸ್ಥಾನಗಳು ಅವರ ಕೈ ಸೇರಿವೆ ಎಂದು ಪೂಜಾರಿ ಅಭಿಮಾನಿಗಳು ಹೇಳಿದರು.
ಈ ಭವಿಷ್ಯವಾಣಿ, ರಾಜ್ಯ ಮತ್ತು ಕೇಂದ್ರ ರಾಜಕೀಯದಲ್ಲಿ ದೊಡ್ಡ ಅಲೆಗಳೆಬ್ಬಿಸಿದೆ, ಜನರಲ್ಲಿ ಕುತೂಹಲ ಹುಟ್ಟಿಸಿದೆ.