Mon. Jul 21st, 2025

ಡ್ರಗ್ಸ್ ಸಾಗಾಣಿಕೆ ಪ್ರಕರಣ: ಕಲಬುರಗಿ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಬಂಧನ

ಡ್ರಗ್ಸ್ ಸಾಗಾಣಿಕೆ ಪ್ರಕರಣ: ಕಲಬುರಗಿ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಬಂಧನ

ಕಲಬುರ್ಗಿ, ಜುಲೈ 14:

ಮಾದಕದ್ರವ್ಯ ಸಾಗಾಣೆಯಲ್ಲಿ ತೊಡಗಿರುವ ಆರೋಪದಡಿ ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಅವರ ಆಪ್ತರಾಗಿರುವ ಲಿಂಗರಾಜ್ ಕಣ್ಣಿ ಅವರನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಲಿಂಗರಾಜ್ ಕಣ್ಣಿಯವರಿಂದ ನಿಷೇಧಿತ 120 ಕೋಡೆನೈನ್ ಸಿರಪ್ ಬಾಟಲಿಗಳು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಅವರು ಮಹಾರಾಷ್ಟ್ರದ ಪೊಲೀಸ್ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

ಇಡೀ ಘಟನೆಯು ಕಲಬುರ್ಗಿಯ ರಾಜಕೀಯ ವಲಯದಲ್ಲಿ ಶಾಕ್‌ತರಂಗ ಎಬ್ಬಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ. ಲಿಂಗರಾಜ್ ಅವರು ಪಕ್ಷದ ಪ್ರಮುಖ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು ಎನ್ನಲಾಗಿದೆ.


ವಿಜ್ಞಾನ ಶಿಕ್ಷಕರೂ ಡ್ರಗ್ಸ್ ತಯಾರಕರಾಗಿ?

ಇದೇ ವೇಳೆ ಪ್ರತ್ಯೇಕ ಪ್ರಕರಣದಲ್ಲಿ, ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ತಯಾರಣೆಗೆ ಸಂಬಂಧಿಸಿದಂತೆ ಶಾಕ್ ಉಂಟುಮಾಡುವ ಬೆಳವಣಿಗೆಯನ್ನು ಬಹಿರಂಗಪಡಿಸಿದ್ದಾರೆ. ಇಬ್ಬರು ವಿಜ್ಞಾನ ಶಿಕ್ಷಕರು ತಮ್ಮ ಫ್ಲಾಟ್‌ನಲ್ಲಿ ಡ್ರಗ್ಸ್ ಪ್ರಯೋಗಾಲಯ ಸ್ಥಾಪಿಸಿ, ಮೆಫೆಡ್ರೋನ್ (ಎಂಡಿ ಡ್ರಗ್ಸ್) ತಯಾರಿಸುತ್ತಿದ್ದರೆಂಬ ಮಾಹಿತಿ ಮೇರೆಗೆ ಅವರನ್ನು ಬಂಧಿಸಲಾಗಿದೆ.

ಬಂಧಿತರಿಂದ 780 ಗ್ರಾಂ ಎಂಡಿ ಡ್ರಗ್ಸ್ ಜೊತೆಗೆ ವಿವಿಧ ರಾಸಾಯನಿಕ ಪದಾರ್ಥಗಳು ಹಾಗೂ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಕಳೆದ ಎರಡು ತಿಂಗಳಲ್ಲಿ ಸುಮಾರು 5 ಕೆಜಿ ಡ್ರಗ್ಸ್ ತಯಾರಿಸಿದ್ದು, ಇದರ ಮೌಲ್ಯ ಸುಮಾರು ₹15 ಕೋಟಿ ಆಗಿದೆ. ಈ ಪೈಕಿ ₹12 ಕೋಟಿಯಷ್ಟು ಡ್ರಗ್ಸ್ ಈಗಾಗಲೇ ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರಾಗಿರುವವರು:

  • ಮನೋಜ್ ಮುಕ್ಲಾವಾ: ಶ್ರೀ ಗಂಗಾನಗರದ ನಿವಾಸಿ, 2020ರಿಂದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ವಿಜ್ಞಾನ ಶಿಕ್ಷಕ.
  • ಇಂದ್ರಜಿತ್ ಬಿಷ್ಣೋಯ್: ಸಾಧುವಾಲಿಯ ನಿವಾಸಿ, ಖಾಸಗಿ ಎಂಡಿ ಪಬ್ಲಿಕ್ ಶಾಲೆಯ ಭೌತಶಾಸ್ತ್ರ ಶಿಕ್ಷಕ.

ಈ ಇಬ್ಬರ ವಿರುದ್ಧವೂ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇವರು ನಗರ ಮುಖ್ಯ ಭಾಗದಲ್ಲಿರುವ ಫ್ಲಾಟ್‌ನಲ್ಲಿ ಅಪರೂಪದ ರಾಸಾಯನಿಕಗಳನ್ನು ಬಳಸಿ ಮಾದಕದ್ರವ್ಯ ತಯಾರಿಸುತ್ತಿದ್ದರು ಎನ್ನಲಾಗಿದೆ.

 

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!