ನ ೧೬: ರಾಜ್ಯ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹಾಗೂ ತಂಡವು
ಉಪ ಲೋಕಾಯುಕ್ತರ ಜೊತೆಯಲ್ಲಿ ಹೆಚ್ಚುವರಿ ರೆಜಿಸ್ಟಾರ್ ಶಶಿಕಾಂತ ಬಿ. ಭಾವಿಕಟ್ಟಿ, ಉಪ ರಜಿಸ್ಟಾರ ಎಂ.ಪಿ. ಚನ್ನಕೇಶವ ರೆಡ್ಡಿ, ಉಪಲೋಕಾಯುಕ್ತರ ಖಾಸಗಿ ಆಪ್ತ ಕಾರ್ಯದರ್ಶಿ ಕಿರಣ ಪ್ರಹ್ಲಾದರಾವ್ ಮುತಾಲಿಕ್ ಪಾಟೀಲ್ ಜಿಲ್ಲೆಗೆ ಆಗಮಿಸಲಿದ್ದು, ಸಾರ್ವಜನಿಕರಿಂದ ಕುಂದುಕೊರತೆ ಅಹವಾಲು, ದೂರುಗಳು ಹಾಗೂ ಮನವಿಗಳನ್ನು ಸ್ವೀಕರಿಸುವ ಜೊತೆಗೆ ಜಿಲ್ಲೆಗೆ ಸಂಬಂಧಿಸಿದಂತೆ ವಿಚಾರಣೆ ಮತ್ತು ಬಾಕಿ ಇರುವ ದೂರುಗಳನ್ನು ವಿಲೇವಾರಿ ಮಾಡಲಿದ್ದಾರೆ. ಎಂದು ಅವರು ತಿಳಿಸಿದ್ದಾರೆ.
ಉಪ ಲೋಕಾಯುಕ್ತರಾದ ನ್ಯಾ. ಕೆ.ಎನ್ ಫಣೀಂದ್ರ ಅವರು ನ.17ರಂದು ರಾತ್ರಿ 8.40 ಗಂಟೆಗೆ ಬೆಂಗಳೂರಿನಿಂದ ಹೊರಟು ನ.18ರಂದು ಬೆ.5.53ಕ್ಕೆ ಯಾದಗಿರಿಗೆ ಆಗಮಿಸಿ ನೂತನ ಸರ್ಕ್ಯೂಟ್ ಹೌಸ್‌ಗೆ ಆಗಮಿಸಲಿದ್ದಾರೆ. ನಂತರ ಬೆ.10 ಗಂಟೆಗೆ ನಗರದ ಜಿಲ್ಲಾಡಳಿತ, ಆಡಿಟೋರಿಯಂ ಹಾಲ್‌ನಲ್ಲಿ ಸಾರ್ವಜನಿಕರ ಆಲಿಸುವರು ಕೊರತೆ ಅಹವಾಲು (ವಿಚಾರಿಸುವರು).
ಅದರಂತೆ ಸಾರ್ವಜನಿಕ ದೂರುಗಳು ಸ್ವೀಕರಿಸುವ ಜೊತೆಗೆ ಮನವಿಗಳನ್ನು ಸಹ ಸ್ವೀಕರಿಸಲಿದ್ದಾರೆ. ಅಂದು ಸಂಜೆ 5.30 ಗಂಟೆಗೆ ಜಿಲ್ಲಾಡಳಿತ ಭವನ, ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ, ರೇಷ್ಮೆ, ತೋಟಗಾರಿಕೆ, ತಾಲೂಕ ಮಟ್ಟದ ಉಪನೋಂದಣಿ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಸಹಾಯಕ ಶಿಕ್ಷಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ನ್ಯಾಯಾಲಯ ಸಿಬ್ಬಂದಿಗಳೊಂದಿಗೆ ಏರ್ಪಡಿಸಲಾದ ”ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ”ದಲ್ಲಿ ಭಾಗವಹಿಸಲಿದ್ದಾರೆ. ನಂತರ ಯಾದಗಿರಿ ನೂತನ ಸರ್ಕ್ಯೂಟ್ ಹೌಸ್‌ದಲ್ಲಿ ವಾಸ್ತವ್ಯ ಮಾಡುವರು