Tue. Jul 22nd, 2025

ಕಾಂಗ್ರೆಸ್‌ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ: ಶಾಸಕ ಬಸನಗೌಡ ಯತ್ನಾಳ್

ಕಾಂಗ್ರೆಸ್‌ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ: ಶಾಸಕ ಬಸನಗೌಡ ಯತ್ನಾಳ್

ಕರ್ನಾಟಕದಲ್ಲಿ ಹಿಂದೂಗಳ ಮುಕ್ತವಾಗಿ ಬದುಕಬೇಕೋ ಬೇಡವೋ? ಎಂಬ ಆತಂಕ ಉಂಟಾಗಿದೆ ಎಂದು ವಿಜಯಪುರ  ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.ಈ ಸರ್ಕಾರದಲ್ಲಿ ಹಿಂದೂಗಳಿಗೆ ಭಯ ವಾತಾವರಣ ನಿರ್ಮಾಣವಾಗಿದ್ದು,

ನಮ್ಮವರು ಖಡ್ಗ ತೆಗೆದುಕೊಂಡರೆ ನೇರವಾಗಿ ಪಾಕಿಸ್ತಾನಕ್ಕೆ ಹೋಗುತ್ತೀರಿ. ನಮಗೆ ಖಡ್ಗ ತೋರಿಸುತ್ತೀರಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ತಾಲಿಬಾನ್‌ಗಳಿಗೆ ಬೆಂಬಲಿಸುವ ವಾತಾವರಣ ನಿರ್ಮಿಸಿದೆ. ಕೋಲಾರ & ಶಿವಮೊಗ್ಗದ ಗಲಭೆ ಪ್ರಕರಣಗಳನ್ನು ಉಲ್ಲೇಖಿಸಿ ಯತ್ನಾಳ್ ಹರಿಹಾಯ್ದಿದ್ದಾರೆ. ಜಿ. ಪರಮೇಶ್ವರ್ ಅಂತಹವರು ಗೃಹ ಸಚಿವರಾದರೆ, ಪೊಲೀಸ್ ಇಲಾಖೆ ನೈತಿಕವಾಗಿ ಕುಸಿಯುತ್ತದೆ ಎಂದು ಯತ್ನಾಳ್ ಟೀಕಿಸಿದ್ದಾರೆ.

ಶಹಾಪುರದಲ್ಲಿ ಮಂಗಳವಾರ ಸಂಜೆ ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾ ಡುತ್ತ, ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾ ಗಿದೆ, ಪೊಲೀಸರು ಹಾಗೂ ಎಸ್ಪಿಯವರ ಮೇಲೆಯೇ ಕಲ್ಲು ತೂರಾಟ ನಡೆಯುತ್ತದೆ ಎಂದು ಅದೆಷ್ಟು ಧೈರ್ಯ ಇರಬೇಕು ಎಂದು ಘರ್ಷಣೆಯ ಘಟನೆಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಯತ್ನಾಳ್‌, ಪೊಲೀಸರಿಗೆ ಮುಕ್ತವಾಗಿ ಅಧಿಕಾರ ಕೊಡುತ್ತಿಲ್ಲ. ಅವರ ಕೈಯಲ್ಲಿ ಶಾಸ್ತ್ರ ಉಪಯೋಗ ಮಾಡದಂತೆ ಸರ್ಕಾದ ಅಸಹಾಯಕತೆ ಮಾಡಿದೆ, ಕರ್ನಾಟಕದಲ್ಲಿ ಹಿಂದೂಗಳ ರಕ್ಷಣೆ ಮಾಡೋರು ಯಾರು ಎಂದು ಪ್ರಶ್ನಿಸಿದರು. ಹಿಂದೂ ಧರ್ಮ ನಾಶ ಮಾಡುತ್ತೀನಿ ಅಂತಾರೆ, ಚಾಕು ಚೂರಿ ತೆಗೆದುಕೊಂಡು ಬಯಲಿಗೆ ಬರುತ್ತಾರೆ, ಕೋಲಾರದಲ್ಲಿ ಖಡ್ಗ ಪ್ರದರ್ಶನ ಮಾಡಿದ್ದಾರೆ ಎಂದು ಯತ್ನಾಳ್ .ಕೆ.ಜಿ.ಹಳ್ಳಿ, ಡಿ.ಜೆಹಳ್ಳಿ, ಹುಬ್ಬಳ್ಳಿಪೋಲಿಸ್ ಠಾಣೆ ಸುಟ್ಟವರ ಮೇಲಿನ ಪ್ರಕರಣಗಳ ವಾಪಸ್ ಗೆ ಸರ್ಕಾರ ಆದೇಶ ಮಾಡಿದೆ, ಸರ್ಕಾರ ಒಂದು ಕೋಮಿಗೆ ಬೆಂಬಲ  ಕೊಡುತ್ತಿರುವುದರಿಂದ ಹಿಂದೂಗಳ ರಕ್ಷಣೆ ಪ್ರಶ್ನೆಯಾಗಿದೆ. ಇದೇ ರೀತಿ ಆಡಳಿತ ನಡೆದರೆ ಹಿಂದೂಗಳೇ ರಕ್ಷಣೆಗೆ ಹೊರ ಬರಬೇಕಾಗುತ್ತದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪರಿಸ್ಥಿತಿ ನಿಯಂತ್ರಣದ ಶಿವಮೊಗ್ಗಕ್ಕೆ ಭೇಟಿ ಕೊಡುವುದಾಗಿ ಯತ್ನಾಳ್’ಹೇಳಿದರು .

                    ಇದನ್ನು ಓದಿ : –ಡಿಸೆಂಬರ್ ವೇಳೆಗೆ ಚಿಲ್ಲರೆ ಹಣದುಬ್ಬರ ಇಳಿಕೆ ಸಾಧ್ಯತೆ: ಹಣಕಾಸು ಕಾರ್ಯದರ್ಶಿ

ಸಿಎಂ ಸಿದ್ದರಾಮಯ್ಯ ಇಳಿಸೊಕೆ ಡಿಕೆ ಶಿ  ಷಡ್ಯಂತ್ರ : ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಅಂತರಿಕ ಕಚ್ಚಾಟ ನಡೆದಿದೆ, ನಾಲ್ಕೈ ದು ಬಾರಿ ಗೆದ್ದವರು ಮಂತ್ರಿ ಆಗಿಲ್ಲ ಎಂದು ಅಸಮಾಧಾನವಿದೆ, ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರನ್ನು ಇಳಿಸೋಕೆ ಷಡ್ಯಂತ್ರ ಮಾಡುತ್ತಿದ್ದಾರೆ .

ಡಿಸೇಂಬರ್ ನಂತರ ಸರ್ಕಾರ ಇರುವುದಿಲ ,ಲೋಕಸಭಾ ಚುನಾವಣೆ ನಂತರ ರಾಜ್ಯ ದಲ್ಲಿ ಹೊಸ ಸರ್ಕಾರ ಅಧಿಕಾರ ಕ್ಕೆ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .

ಡಿಕೆ ಸಿ  ಡೈರಕ್ಷನ್: ತಮ್ಮದೇ ಪಕ್ಷದ, ಸರ್ಕಾರದ ವಿರುದ್ಧ ಟೀಕೆಗಳ ಸುರಿಸುವ ಶಾಮನೂರು ಹಾಗೂ ಬಿ.ಕೆ.ಹರಿಪ್ರಸಾದ ಅವರ ತಂತ್ರಗಾರಿಕೆಯ ಹಿಂದೆ ಡಿ.ಕೆ.ಶಿವಕುಮಾ‌ರ  ಅವರ ಡೈರೆಕ್ಷನ್ ಇದೆ ಎಂದು ಆರೋಪಿಸಿದ ಯತ್ನಾಳ್‌, ಕಾಂಗ್ರೆಸ್‌ ಪಕ್ಷದಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದೆ..ಎಂದರು .

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!