Sun. Nov 30th, 2025

ಸೈದಾಪುರದಲ್ಲಿ ಕ್ರೂರ ಹತ್ಯೆ: ಅಳಿಯನಿಂದ ಅತ್ತೆ, ಮಾವ, ಹೆಂಡತಿ ಕೊಲೆ.

ಸೈದಾಪುರದಲ್ಲಿ ಕ್ರೂರ ಹತ್ಯೆ: ಅಳಿಯನಿಂದ ಅತ್ತೆ, ಮಾವ, ಹೆಂಡತಿ ಕೊಲೆ.

ಯಾದಗಿರಿ ಜು ೧೯: ಕಬ್ಬಿಣದ ರಾಡ್​ ಹಾಗು ಚಾಕುವಿನಿಂದ ಪತ್ನಿ, ಅತ್ತೆ ಹಾಗು ಮಾವನನ್ನು ಅಳಿಯ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಾದಗಿರಿ ಬಳಿಯ ಸೈದಾಪುರ ಬಳಿ ನಡೆದಿದೆ.

ದಾವಣಗೆರೆ ಮೂಲದ ಅನ್ನಪೂರ್ಣ (25), ಕವಿತಾ (45) ಮತ್ತು ಬಸವರಾಜಪ್ಪ (52) ಎಂಬವರನ್ನು ಅಳಿಯ ನವಿನ (30) ಎಂಬಾತ ಕಬ್ಬಿಣದ ರಾಡ್ ಮತ್ತು ಚಾಕುವಿನಿಂದ ಕೊಲೆ ಮಾಡಿದ್ದಾನೆ.

ಮುಣಗಲ್ ಗ್ರಾಮದ ನಿವಾಸಿ ನವೀನು ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಮೂಲದ ಅನ್ನಪೂರ್ಣನನ್ನು ವಿವಾಹವಾಗಿದ್ದನು. ದಂಪತಿಗೆ ಒಂದು ಮಗಳು ಇದ್ದಾರೆ. ಈ ಮಧ್ಯೆ, ಪತಿ ನವೀನನಿಂದ ಕಿರುಕುಳಕ್ಕೊಳಗಾದ ಅನ್ನಪೂರ್ಣ ಒಂದು ವರ್ಷ ಹಿಂದೆ ತನ್ನ ಪೋಷಕರ ಬಳಿ ದಾವಣಗೆರೆಗೆ ಹಿಂದಿರುಗಿದ್ದರು

ಬುಧವಾರ, ಪತಿ ನವೀನ್ ಮತ್ತೆ ಸೇರಲು ಕರೆ ಮಾಡಿ, ಮನವೊಲಿಸಿ ಕರೆಸಿಕೊಂಡಿದ್ದ. ಪೋಷಕರು ತಮ್ಮ ಮಗಳ ಹಿತದೃಷ್ಟಿಯಿಂದ ಒಪ್ಪಿಗೆಯೊಂದಿಗೆ ಮಗುವನ್ನು ಹಂಬಲಿಸುತ್ತಿದ್ದಾಗ, ಶಾಂತಿ ಸಭೆ ನಡೆಸಿ, ಮತ್ತೆ ಜೊತೆಯಾಗಲು ತಯಾರಾದರು. ಅನ್ನಪೂರ್ಣನ ಪೋಷಕರು ಮಗಳನ್ನ ತಮ್ಮ ಅಳಿಯನ ಮನೆಗೆ ಬಿಟ್ಟುಕೊಡಲು ಬಂದಿದ್ದರು. ಸಭೆಯ ನಂತರ, ಪತಿ-ಪತ್ನಿ ತಾಯಿಯನ್ನು ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಿಟ್ಟುಹೋಗುತ್ತಿದ್ದಾಗ, ಈ ದಾರುಣ ಘಟನೆ ನಡೆದಿದೆ.

ಬಸ್ ನಿಲ್ದಾಣದ ಹತ್ತಿರ, ನವೀನು ಕಬ್ಬಿಣದ ರಾಡಿನಿಂದ ದಾಳಿ ಮಾಡಿ, ತದನಂತರ ಚಾಕುವಿನಿಂದ ಹಲ್ಲೆ ಮಾಡಿ, ಆತನ ಹೆಂಡತಿ ಅನ್ನಪೂರ್ಣ, ತಾಯಿ ಕವಿತಾ ಮತ್ತು ಮಾವ ಬಸವರಾಜಪ್ಪ ಎಲ್ಲರನ್ನೂ ಕೊಲೆಮಾಡಿದ್ದಾನೆ. ಮೃತದೇಹವನ್ನು ವಡಗೇರಾ ತಾಲ್ಲೂಕಿನ ಜೋಳದಡಗಿ ಹತ್ತಿರ ತೊರೆದಿದ್ದಾನೆ.

ಸದ್ಯ, ಪೊಲೀಸರು ದಾಳಿ ನಡೆಸಿ, ಅನ್ನಪೂರ್ಣನ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Related Post

Leave a Reply

Your email address will not be published. Required fields are marked *

error: Content is protected !!