ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ
ನನ್ನ ಜಾಗದಲ್ಲಿ ಬೇರೆಯವರಿಗೆ ಚುನಾವಣೆ ಟಿಕೆಟ್ ನೀಡಿರುವುದರಿಂದ ಬಿಜೆಪಿ ವಿರುದ್ಧ ಅಸಮಾಧಾನವಿದೆ ಎಂದು ಗೌಡರು ಹೇಳಿದರು.
ಕಾಂಗ್ರೆಸ್ ಸೇರುವುದನ್ನು ತಳ್ಳಿಹಾಕಿದ ಅವರು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಪ್ರತಿಪಾದಿಸಿದರು.
“ಹೌದು, ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ನನಗೆ ಆಹ್ವಾನ ಬಂದಿತ್ತು, ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ.. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು” ಎಂದು ಅವರು ಹೇಳಿದರು.