ಯಾದಗಿರಿ ಅ ೦೪ :ಭಾರತ ಸರ್ಕಾರದ ಪಿ.ಎಂ.ವಿಶ್ವಕರ್ಮ ಎಂಬ ಹೊಸ ಯೋಜನೆಯಡಿ ಕುಶಲಕರ್ಮಿಗಳ ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ವೃತ್ತಿ, ಚಟುವಟಿಕೆ ಮುಂದುವರೆಸಲು ವಾಣಿಜ್ಯ ಬ್ಯಾಂಕುಗಳಿಂದ ಸಾಲ ಸೌಲಭ್ಯವನ್ನು ಸವಲತ್ತುಗಳ ಅರ್ಹ ಕುಶಲಕರ್ಮಿಗಳಿಗೆ ನೀಡಲಾಗುವುದು ಎಂದು ಯಾದಗಿರಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಅವರು ತಿಳಿಸಿದ್ದಾರೆ.
ಪಿಎಂ ವಿಶ್ವಕರ್ಮ ಪ್ರಮಾಣಪತ್ರ, ಗುರುತಿನ ಚೀಟಿ, ಐಡಿಕಾರ್ಡ್, ಕೌಶಲ್ಯಭಿವೃದ್ಧಿ ತರಬೇತಿ, ಉಪಕರಣಗಳಿಗೆ ಪ್ರೋತ್ಸಹ, ಕ್ರೆಡಿಟ್ ಸೌಲಭ್ಯ, ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ, ಮಾರುಕಟ್ಟೆ ಬೆಂಬಲ ಸೌಲಭ್ಯ ಫಲಾನುಭವಿಗಳು ನಮೂದಿಸಿರುವ ಸಾಂಪ್ರಾದಾಯಿಕ ಚಟುವಟಿಕೆಗಳಲ್ಲಿ ತೊಡಗಿರಬೇಕು, ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರವೇ ನೋಂದಣಿ ಮಾಡಿಕೊಳ್ಳುವುದು, ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿರಬಾರದು, ಈ ಯೋಜನೆಯಡಿಯಲ್ಲಿ ಈ ಕೆಳಕಂಡ ಕುಶಲರ್ಮಿಗಳಿಗೆ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಸೌಲಭ್ಯವನ್ನು ಒದಗಿಸಲಾಗುವುದು.
ಮೊದಲ ಬಾರಿಗೆ ರೂ.! (ಒಂದು ಲಕ್ಷ) ಸಾಲ ನೀಡಲಾಗುವುದು. 18 ತಿಂಗಳ ಒಳಗೆ ರೂ.1ಲಕ್ಷ ರೂಪಾಯಿಗಳು ಹಿಂತಿರುಗಿಸಿದರೆ, ಇನ್ನು ರೂ.2 (ಎರಡು ಲಕ್ಷ) ರೂಪಾಯಿಗಳು ಪಡೆಯಬಹುದಾಗಿದೆ.
ಬಡ್ಡಿ ದರವನ್ನು ರೂ.5 ಎಷ್ಟು ಕಡಿಶಸ್ತ್ರ ತಯಾರಕರು, ಕಮ್ಮಾರ ವೃತ್ತಿ ಮಾಡುವವರು, ಕಲ್ಲು ಕುಟಗ ವೃತ್ತಿ ಮಾಡುವವರು, ಬಟ್ಟೆ ಚಾಪೆ-ಕಸ ಪೊರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ಸಾಮಾನು ತಯಾರಿಸುವವರ, (ಸಾಂಪ್ರದಾಯಿಕ) ಕ್ಷೌರಿಕ ವೃತ್ತಿ ಮಾಡುವವರು, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ಅಗಸರು (ದೋಬಿ), ಆಭರಣ ತಯಾರಕರು, ಶಿಂಪಿಗೆ (ಬಟ್ಟೆ ಹೊಲೆಯುವವರು), ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ ಮಾಡುವವರು), ಚಮ್ಮಾರಿಕ್ಕೆ (ಪಾದರಕ್ಷೆ ತಯಾರಕುರ), ಬೀಗ ತಯಾರಕರು, ಅರ್ಜಿಯನ್ನು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್ ಕೆಂಟ್) ದಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಛೇರಿ ಜಿಲ್ಲಾ ಕೈಗಾರಿಕೆ ಕೇಂದ್ರ ಡಿ.ಡಿ.ಯು ಶಾಲೆ ಹತ್ತಿರ ಚಿತ್ತಾಪೂರ ರಸ್ತೆ ಯಾದಗಿರಿ 585 202, ಹಾಗೂ ಶ್ರೀ ಆನಂದ ದ್ವಿದ.ಸ ಚಿಕ್ಕಕೇ ಯಾದಗಿರಿ ಮೊಬೈಲ್ ಸಂ.9241818180ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.