Sun. Mar 29th, 2026

ಅತಿದೀರ್ಘ ಗೃಹ ಸಚಿವರಾಗಿ ಅಮಿತ್ ಶಾ ಹೊಸ ದಾಖಲೆ– ಲಲಿತಾ ಅನಪುರ

ಅತಿದೀರ್ಘ ಗೃಹ ಸಚಿವರಾಗಿ ಅಮಿತ್ ಶಾ ಹೊಸ ದಾಖಲೆ– ಲಲಿತಾ ಅನಪುರ

ಗೋವಿಂದ ವಲ್ಲಭ ಪಂತ್ ಮತ್ತು ಅಡ್ವಾಣಿಯವರ ದಾಖಲೆ ಮುರಿದು, ಅಮಿತ್ ಶಾ ನಿರ್ವಿಕಾರ ನಾಯಕತ್ವಕ್ಕೆ ಶ್ಲಾಘನೆ-ಲಲಿತಾ ಅನಪುರ

ಯಾದಗಿರಿ, ಆಗಸ್ಟ್ 6: ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಶಾ ಅವರು ಹೊಸ ದಾಖಲೆ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ಹೇಳಿದರು.

ಅವರು 2019ರ ಮೇ 30ರಿಂದ ಗೃಹ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಲಾಲ್ ಕೃಷ್ಣ ಅಡ್ವಾಣಿ ಅವರ 6 ವರ್ಷ 64 ದಿನಗಳು ಹಾಗೂ ಗೋವಿಂದ ವಲ್ಲಭ ಪಂತ್ ಅವರ 6 ವರ್ಷ 56 ದಿನಗಳ ದಾಖಲೆಗಳನ್ನು ಹಿಂದಿಕ್ಕಿ, ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಮಿತ್ ಶಾ ಅವರ ಹೆಗ್ಗುರುತು ಆದೇಶಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಹಾಗೂ 370ನೇ ವಿಧಿಯ ರದ್ದತಿ ಪ್ರಮುಖವಾಗಿವೆ. ಜಮ್ಮು ಮತ್ತು ಕಾಶ್ಮೀರದಿಂದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

ಇದರೊಂದಿಗೆ ರಾಜ್ಯದಲ್ಲಿ ಭಯೋತ್ಪಾದನೆ ಕ್ರಮೇಣ ಕುಗ್ಗಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳು ಹೊಸ ಬಣ್ಣವನ್ನು ಪಡೆದುಕೊಂಡಿವೆ. ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ಅಮಿತ್ ಶಾ ಅವರ ನಿರ್ಧಾರಾತ್ಮಕ ನಾಯಕತ್ವಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Related Post

Leave a Reply

Your email address will not be published. Required fields are marked *

error: Content is protected !!