ಹುಬ್ಬಳ್ಳಿ ಆ ೦೭:- ಡಕಾಯಿತಿ ಗ್ಯಾಂಗ್ ಸದಸ್ಯನ ಮೇಲೆ ಗೋಕುಲ ರೋಡ್ ಪೊಲೀಸರು (Gokul Road Police) ಗುಂಡು ಹಾರಿಸಿ ಬಂಧಿಸಿದ್ದಾರೆ. ಮಹೇಶ್ ಸೀತಾರಾಮ್ ಕಾಳೆ ಬಂಧಿತ ಆರೋಪಿ. ಈತನ ಗ್ಯಾಂಗ್ ಸೋಮವಾರ ನಸುಕಿನ ಜಾವ ಮನೆ ಕಳ್ಳತನಕ್ಕೆ ಇಳಿದಿದ್ದ ವೇಳೆ, ವಿಚಾರ ತಿಳಿದು ಕಾರ್ಯಾಚರಣೆಗೆ ಇಳಿದ ಪೊಲೀಸರು ಮಹೇಶ್‌ನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಮಹೇಶ್ ಮತ್ತು ಈತನ ಗ್ಯಾಂಗ್ ಹುಬ್ಬಳ್ಳಿಯ ವಿವಿಧ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರ ಬಲೆಗೆ ಸಿಕ್ಕಿದ್ದ ಮಹೇಶ್ ಪರಾರಿಯಾಗಿದ್ದ ತನ್ನ ಗ್ಯಾಂಗ್‌ನವರಿರುವ ಸ್ಥಳವನ್ನು ತೋರಿಸುತ್ತೇನೆ ಎಂದು ಹೇಳಿ ಪೊಲೀಸರನ್ನು ಕರೆದುಕೊಂಡು ಹೋಗಿದ.
ಆದರೆ, ಎಚ್ಚರಿಕೆಯಿಂದ ಸ್ಥಳಕ್ಕೆ ಹೋದ ನಂತರ, ಆಕಸ್ಮಿಕವಾಗಿ ಮಹೇಶ್ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಸನ್ನಿವೇಶ ತೀವ್ರ ತಿರುವು ಪಡೆದುಕೊಂಡಿದ್ದು, ಪ್ರಾಣರಕ್ಷಣೆಗಾಗಿ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್‌ಐ ಸಚಿನ್ ದಾಸರೆಡ್ಡಿ ಈತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡಿನಿಂದ ಗಾಯಗೊಂಡು ನೋವಿನಿಂದ ಒದ್ದಾಡುತ್ತಿದ್ದ ಮಹೇಶ್‌ನನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್‌ಐ ಸಚಿನ್ ದಾಸರೆಡ್ಡಿ ಮತ್ತು ಪೇದೆ ವಸಂತ ಗುಡಿಗೇರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಗೋಕುಲ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣದ ಬಗ್ಗೆ ತನಿಖೆ ಮುಂದುವರಿಸುತ್ತಿದ್ದಾರೆ, ಮತ್ತು ಉಳಿದಿರುವ ಡಕಾಯಿತರನ್ನು ಬಂಧಿಸುವ ಕಾರ್ಯ ತೀವ್ರಗೊಳಿಸಲಾಗಿದೆ.
- ಆರು ತಿಂಗಳಿಂದ ಕಮಿಷನ್ ಬಾಕಿ — ನವೆಂಬರ್ ಪಡಿತರ ಎತ್ತುವಳಿ ನಿಲ್ಲಿಸಲು ವಿತರಕರ ಸಂಘದ ಎಚ್ಚರಿಕೆ
- ಯಾದಗಿರಿ ರೈತರಿಗೆ ಭಾರತ ಮಾಲಾ ಯೋಜನೆ ಬಾಧೆ — ಪರಿಹಾರ ಧನ ಹಾಗೂ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಡಾ. ಭೀಮಣ್ಣ ಮೇಟಿ ಆಗ್ರಹ
- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ; ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ನಾಮಪತ್ರ ಸಲ್ಲಿಕೆ
- ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ
- ಸಾರ್ವಜನಿಕ–ಅಧಿಕಾರಿ ಸಂವಾದ ಅಗತ್ಯ: RTI ಕಾಯ್ದೆ ಪರಿಣಾಮಕಾರಿತ್ವಕ್ಕೆ ಆಯುಕ್ತ ಬದ್ರುದ್ದೀನ್ ಕರೆ

