Tue. Jul 22nd, 2025

ಭಾರತ ಸತತ 6 ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ,18,000′ ರನ್‌ಗಳ ಶಿಖರ

ಭಾರತ ಸತತ 6 ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ,18,000′ ರನ್‌ಗಳ ಶಿಖರ

ಭಾರತ ಸತತ 6 ಭರ್ಜರಿ ಗೆಲುವು

ತನ್ನದಾಗಿಸಿಕೊಂಡಿದೆ.ಏಕದಿನ ವಿಶ್ವಕಪ್ 2023ರ 29ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಭರ್ಜರಿ 100 ರನ್‌ಗಳ ಜಯ ಸಾಧಿಸಿದೆ. ಅಲ್ಲದೆ ಈ ಗೆಲುವಿನೊಂದಿಗೆ ವಿಶ್ವಕಪ್‌ನಲ್ಲಿ 59ನೇ ಜಯ ತನ್ನದಾಗಿಸಿದೆ. ಅತ್ತ ಟೂರ್ನಿಯಲ್ಲಿ ಸತತ ನಾಲ್ಕು ಹಾಗೂ ಒಟ್ಟು 5 ಸೋಲು ಕಂಡ ಇಂಗ್ಲೆಂಡ್‌ ವಿಶ್ವಕಪ್‌ನಿಂದ ಬಹುತೇಕ ಹೊರಬಿದ್ದಿದೆ. ಲಖನೌನ ತುಂಬಿದ ಮೈದಾನದಲ್ಲಿ ಭಾರತದ ಬ್ಯಾಟಿಂಗ್‌ ವೇಳೆ ಮೈದಾನದಲ್ಲಿ ಮೌನ ಆವರಿಸಿತ್ತು. ಬ್ಯಾಟಿಂಗ್‌ನಲ್ಲಿ ಕುಸಿತ ಕಂಡಿದ್ದ ಭಾರತ, ಬೌಲಿಂಗ್‌ನಲ್ಲಿ ಅಬ್ಬರಿಸಿತು. ಬುಮ್ರಾ, ಶಮಿ, ಕುಲ್ದೀಪ್‌ ಆಗಾಗ ವಿಕೆಟ್‌ ಕಬಳಿಸುತ್ತಾ ಆಂಗ್ಲರಿಗೆ ಶಾಕ್‌ ಕೊಟ್ಟರು

18,000′ ರನ್‌ಗಳ ಶಿಖರವೇರಿದ ರೋಹಿತ್ ಶರ್ಮಾ

ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಇಂದು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (477 ಇನ್ನಿಂಗ್ಸ್) 18,000 ರನ್ ಪೂರ್ಣಗೊಳಿಸಿದ್ದಾರೆ. ಈ ಸಾಧನೆ ಮಾಡಿದ 5ನೇ ಭಾರತೀಯ ಇವರು. ಈ ಮೊದಲು ತೆಂಡೂಲ್ಕರ್(34,357), ವಿರಾಟ್ ಕೊಹ್ಲಿ(26,121), ರಾಹುಲ್ ದ್ರಾವಿಡ್(24064), ಸೌರವ್ ಗಂಗೂಲಿ(18,433) ಈ 18,000 ರನ್ ಗಡಿ ದಾಟಿದ್ದರು. 2023ರಲ್ಲಿ ODIನಲ್ಲಿ 1000 ರನ್ ಪೂರೈಸಿದ ಮೊದಲ ನಾಯಕ ಎಂಬ ಕೀರ್ತಿಗೂ ರೋಹಿತ್ ಭಾಜನರಾದರು.

 ಪಾಯಿಂಟ್ಸ್ ಪಟ್ಟಿಯಲ್ಲಿ ದೊಡ್ಡ ಬದಲಾವಣೆ

ವಿಶ್ವಕಪ್‌ನ 29ನೇ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರೀ ಬದಲಾವಣೆಯಾಗಿದೆ. ಭಾರತ ಸತತ 6 ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ ತಂಡ ಐದು ಸೋಲುಗಳೊಂದಿಗೆ 10ನೇ ಸ್ಥಾನದಲ್ಲಿದೆ. ಇದರೊಂದಿಗೆ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಗುಳಿದಿದೆ. ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಅಗ್ರ 4ರಲ್ಲಿವೆ

ವಿಶ್ವಕಪ್‌ನಲ್ಲಿ ಭಾರತ…

ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಜಯ

ಅಫ್ಘಾನಿಸ್ತಾನ ವಿರುದ್ಧ 8 ವಿಕೆಟ್‌ಗಳ ಜಯಘೋಷ

ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ದಿಗ್ವಿಜಯ

ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಗೆಲುವು

ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಜಯಭೇರಿ >

ಇಂಗ್ಲೆಂಡ್ ವಿರುದ್ಧ 100 ರನ್‌ಗಳ ವಿಜಯೋತ್ಸ

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!