Mon. Dec 1st, 2025

Ujjwala scheme : ಉಚಿತ ಗ್ಯಾಸ್‌ ಪಡೆಯಲು ಇಲ್ಲಿದೆ ಮತ್ತೊಂದು ಅವಕಾಶ,ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸುವುದು ಹೇಗೆ?

Ujjwala scheme : ಉಚಿತ ಗ್ಯಾಸ್‌ ಪಡೆಯಲು ಇಲ್ಲಿದೆ ಮತ್ತೊಂದು ಅವಕಾಶ,ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸುವುದು ಹೇಗೆ?

Free Gas Connection : ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ವಂಚಿತರಾಗಿದ್ದವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಯಾವುದೇ ಜಿಲ್ಲೆ, ರಾಜ್ಯದಿಂದ ಫಲಾನುಭವಿಗಳು ಬೇಗನೆ ಅರ್ಜಿ ಸಲ್ಲಿಸಿದ್ರೆ ಉಚಿತ ಗ್ಯಾಸ್ ಸಂಪರ್ಕ ಪಡೆಯಬಹುದು.

ಗ್ಯಾಸ್‌ ಸಂಪರ್ಕ ಪಡೆಯುವ ಅವಕಾಶವನ್ನು ಕೇಂದ್ರ ಸರ್ಕಾರ ಮತ್ತೆ ಕಲ್ಪಿಸಿದ್ದು, ಗ್ರಾಹಕರು ನೇರವಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಂಪರ್ಕವನ್ನು ಈ ಹಿಂದೆ ಪಡೆಯದ ಜನರು ಹೊಸ ಗ್ಯಾಸ್ ಸಂಪರ್ಕ ಪಡೆಯಬಹುದು.
ನೀವು ಗ್ಯಾಸ್‌ ಸಂಪರ್ಕ ಪಡೆಯಲು ತೈಲ ಕಂಪನಿಯ ಗ್ಯಾಸ್‌ ಏಜೆನ್ಸಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಂಡು ಉಜ್ವಲ್‌ ಯೋಜನೆಯಡಿ ಸಂಪರ್ಕ ನೀಡುವಂತೆ ಆನ್‌ಲೈನ್‌ ಮೂಲಕ ಅರ್ಜಿಯೊಂದಿಗೆ ಅಗತ್ಯ ದಾಖಲಾತಿ ಸಲ್ಲಿಸಬೇಕಿದೆ ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆಯಡಿ ಈಗಾಗಲೇ ದೇಶದೆಲ್ಲೆಡೆ 10.35 ಕೋಟಿ ಮಂದಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ.

ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ಮಹಿಳೆಯರು ನೇರವಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್‌ನಲ್ಲಿ ಹೆಸರು, ವಿಳಾಸ, ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌ ಸಂಖ್ಯೆಯನ್ನು ಅಪ್‌ಲೋಡ್‌ ಮಾಡಬೇಕು. ಗ್ರಾಹಕರು ತಮಗೆ ಬೇಕಾದ ಗ್ಯಾಸ್‌ ಏಜೆನ್ಸಿಗಳಿಂದ ಸಂಪರ್ಕ ಪಡೆಯಲು ತಾವೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಯೋಜನೆಯಡಿ 14.2 ಕೆಜಿಯ ಒಂದು ಸಿಲಿಂಡರ್‌ ಪಡೆಯಲು ಮಾತ್ರ ಅವಕಾಶವಿದೆ. ಆದರೆ, 5 ಕೆಜಿಯ ಎರಡು ಸಿಲಿಂಡರ್‌ ಸಹ ಪಡೆಯಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : https://www.pmuy.gov.in/ujjwala2.html

Related Post

Leave a Reply

Your email address will not be published. Required fields are marked *

error: Content is protected !!