ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿ ಇದೇ ತಿಂಗಳ 29ಕ್ಕೆ
ಎರಡು ವರ್ಷ ಆಗಲಿದೆ. ಆದರೂ, ಅಭಿಮಾನಿಗಳಿಗೆ ಅಪ್ಪು ಮೇಲಿನ ಅಭಿಮಾನ ಒಂದಿಷ್ಟು ಕಡಿಮೆಯಾಗಿಲ್ . ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ರೈತ, ಅಪ್ಪು ಅಭಿಮಾನಿ ಸತ್ಯನಾರಾಯಣ ಅವರು, ಎರಡು ಎಕರೆ ಗದ್ದೆಯಲ್ಲಿ ವಿವಿಧ ಭತ್ತದ ತಳಿಗಳನ್ನು ಬೆಳೆದು ಅಪ್ಪು ಚಿತ್ರ ಬಿಡಿಸಿದ್ದಾರೆ. ಭಾವಚಿತ್ರದ ಕೆಳಗೆ ‘ಕರ್ನಾಟಕ ರತ್ನ’ ಎನ್ನುವ ಅಕ್ಷರಗಳನ್ನು ಬೆಳೆಯಲ್ಲೇ ಬರೆದಿದ್ದಾರೆ. ಇದರ ಒಂದೊಂದು ಅಕ್ಷರ 40 ಅಡಿ ಇದೆ