ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಡೀ ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಿರ್ಧರಿಸಿದ್ದು, ಬಂದ್ ದಿನಾಂಕವನ್ನು ಸೋಮವಾರ ಘೋಷಿಸುವುದಾಗಿ ಹೇಳಿದ್ದಾರೆ. 26 ರಂದು ಬೆಂಗಳೂರು ಬಂದ್ ಮಾಡುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಎಲ್ಲರೂ ಒಟ್ಟು ಸೇರಿ ಇಡೀ ರಾಜ್ಯಾದ್ಯಂತ ಬಂದ್ ಮಾಡಿದರೆ ಹೋರಾಟಕ್ಕೊಂಡು ಶಕ್ತಿ ಬರುತ್ತದೆ. ಹೀಗಾಗಿ ಅವರ ಜೊತೆ ಮಾತನಾಡಿ ಕರ್ನಾಟಕ ಬಂದ್ ಡೇಟ್ ಅನೌನ್ಸ್ ಮಾಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅಂಗಡಿಗಳು ಬಹುತೇಕ ಬಂದ್, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಅನುಮಾನ. ಹೀಗಾಗಿ ಸಾರ್ವಜನಿಕ ಸಾರಿಗೆಯಲ್ಲಿ ವ್ಯತ್ಯಯ ಆಗಬಹುದು, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಬಂದ್ ಆಗುವ ಸಾಧ್ಯತೆ, ಹೋಟೆಲ್, ರೆಸ್ಟೋರೆಂಟ್‌ಗಳು ಸಹ ಬಂದ್ ಆಗುವುದು ಬಹುತೇಕ ಖಚಿತ. ಓಲಾ, ಊಬರ್ ಕ್ಯಾಬ್‌ಗಳು ಇರುವುದಿಲ್ಲ. ಆಸ್ಪತ್ರೆಗಳು, ಅಗ್ನಿ ಶಾಮಕ ಸೇವೆ, ಮೆಡಿಕಲ್, ಹಾಲಿನ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಶಾಲಾ-ಕಾಲೇಜು ರಜೆ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಅಂದು ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ವರೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ. ಬಂದ್ ಕುರಿತು ಮಾತನಾಡಿದ ರೈತಪರ ಹೋರಾಟಗಾರ ಕುರುಬೂರು ಶಾಂತಕುಮಾರ್, ಬೆಂಗಳೂರಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಬೇಕು ಎಂದು ಆಗ್ರಹಿಸಿದರು. ಇದು ಬೆಂಗಳೂರು ನಾಗರೀಕರ ಬಂದ್ ಆಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ, ಆಟೋ-ಟ್ಯಾಕ್ಸಿ, ಖಾಸಗಿ ವಾಹನಗಳನ್ನು ಬಂದ್ ಮಾಡಿ ಬೆಂಬಲ ನೀಡುವಂತೆ ಒತ್ತಾಯಿಸಿದರು.

