ಸುರಪೂರ, ಸೆ. 21: ನಗರದಲ್ಲಿನ ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ
ಈ ಸಂದರ್ಭದಲ್ಲಿ ಮಾತ ನಾಡಿದ ವಿದ್ಯಾರ್ಥಿ ಗಳು, ಮದ್ಯಾನದ ಊಟದಲ್ಲಿ ಬಾಲ ಹುಳುಗಳು ಪತ್ತೆ ಯಾಗಿದ್ದು ಇದನ್ನು ಪ್ರಶ್ನಿಸಿದರೆ ಅಡುಗೆ ಸಿಬ್ಬಂದಿಗಳು ತಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಎಂದು ಆರೋಪಿಸಿದರು, ಮೇಲ್ವಿಚಾರಕರು ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ ಆದ್ದರಿಂದ ಇಂತಹ ಹುಳುಬಿದ್ದ ಆಹಾರ ತಯಾರಿಸಿದ ಅಡುಗೆ ಸಿಬ್ಬಂದಿಯವರ ಮೇಲೆ ಮತ್ತು ವಸತಿ ನಿಲಯದ ಮೇಲ್ವಿಚಾರಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ವಸತಿ ನಿಲಯದ ಮೇಲ್ವಿಚಾರಕು ಆಗಮಿಸಿ ವಿದ್ಯಾರ್ಥಿಗಳ ಬೇಡಿಕೆ ಆಲಿಸಿ,ನಂತರ ಈ ಮುಂದೆ ಇಂತಹ ಘಟನೆ ಮರುಕಳಿಸದಂತೆ ಗಮನ ವಹಿಸುವ ಜೊತೆಗೆ ಅಡುಗೆ ಸಿಬ್ಬಂದಿಗಳನ್ನು ಬದಲಾಯಿಸುವುದಾಗಿ
ಭರವಸೆ ಪತ್ರವನ್ನು ತಹಸೀಲ್ದಾರರಿಗೆ ಬರೆದು ಕೊಟ್ಟನಂತರ ಪ್ರತಿಭಟನೆ ನಿಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯದ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.