Mon. Jul 21st, 2025

ಮಂಡ್ಯ ಬಂದ್‌ಗೆ ಬೆಂಬಲ ಕಾವೇರಿ ನೀರು ವಿಚಾರವಾಗಿ ಕನ್ನಡಪರ ಸಂಘಟನೆಗಳು ನಾಳೆ ಮಂಡ್ಯ ಜಿಲ್ಲೆ ಬಂದ್‌ಗೆ ಕರೆ ನೀಡಿವೆ.

ಮಂಡ್ಯ ಬಂದ್‌ಗೆ ಬೆಂಬಲ ಕಾವೇರಿ ನೀರು ವಿಚಾರವಾಗಿ ಕನ್ನಡಪರ ಸಂಘಟನೆಗಳು ನಾಳೆ ಮಂಡ್ಯ ಜಿಲ್ಲೆ ಬಂದ್‌ಗೆ ಕರೆ ನೀಡಿವೆ.

ಈ ಬಂದ್‌ಗೆ ಉತ್ತಮ ಬೆಂಬಲ ಸಿಗುತ್ತಿದೆ. ಹಲವು ಕನ್ನಡ ಸಂಘಟನೆಗಳ ಜೊತೆ ಸ್ಥಳೀಯ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿವೆ. ನಾಳಿನ ಮಂಡ್ಯ ಬಂದ್‌ನಲ್ಲಿ ಆಟೋ ಚಾಲಕರ ಸಂಘಟನೆಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಕೂಡ ಪಾಲ್ಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಈ ಬಂದ್ ಬಳಿಕ ಕರ್ನಾಟಕ ಬಂದ್ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ವರದಿಯಾಗಿದೆ

ತಮಿಳುನಾಡಿಗೆ ನೀರು. ನೆಟ್ಟಿಗರ ಆಕ್ರೋಶ

ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸರ್ಕಾರದ ವಿರುದ್ಧ ವಿಭಿನ್ನ ಪೋಸ್ಟರ್ ಹಾಕುವ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ‘ನಾವು ನುಡಿದಂತೆ ನಡೆದಿದ್ದೇವೆ.. 6ನೇ ಗ್ಯಾರಂಟಿ ಜಾರಿ ಮಾಡಿದ್ದೇವೆ.. ಕೆಆರ್‌ಎಸ್ ಡ್ಯಾಂ ಖಾಲಿ ಆಗುವವರೆಗೂ ನಿತ್ಯ ನೀರು ಬಿಡುತ್ತೇವೆ.. ಇದೊಂದು ಐತಿಹಾಸಿಕ ನಿರ್ಧಾರ’ ಎಂದು ಸರ್ಕಾರವನ್ನು ಟ್ರೋಲ್ ಮಾಡಲಾಗುತ್ತಿದೆ.

 

ಮೋದಿ ಮಧ್ಯಸ್ಥಿಕೆ ವಹಿಸಲಿ: ಉಗ್ರಪ್ಪ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ರಾಜ್ಯದ ಜನತೆ ಹಾಗೂ ರೈತರ ಹಿತ ಕಾಪಾಡಲು ಬದ್ಧವಾಗಿದೆ. ಭಾಷೆ, ನೆಲ, ಜಲ ಬಂದಾಗ ನಾವು ರಾಜಕೀಯವಾಗಿ ಪರಿಗಣಿಸಬಾರದು. ಸಮಸ್ತ ಜನತೆಯ ಹಿತವನ್ನು ಕಾಪಾಡಬೇಕು ಎಂದು ಹೇಳಿದ ಉಗ್ರಪ್ಪ, ರಾಜ್ಯದಿಂದ 25 ಜನ ಸಂಸದರನ್ನು ಹೊಂದಿರುವ ಪ್ರಧಾನಿ ರಾಜ್ಯದ ಬಗ್ಗೆ ಬದ್ಧತೆ ಇದ್ದರೆ ಮಧ್ಯಪ್ರವೇಶ ಮಾಡಬೇಕು ಎಂದಿದ್ದಾರೆ

ಕೇಂದ್ರ ಸರ್ಕಾರಕ್ಕೆ ಎಂ.ಬಿ ಪಾಟೀಲ್ ಮನವಿ.

ರಾಜ್ಯದಲ್ಲಿ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಅರಿಯಲು ತಜ್ಞರ ತಂಡವನ್ನು ಕಳುಹಿಸಿ. ಅಲ್ಲಿ ತನಕ ಸುಪ್ರೀಂ ಕೋರ್ಟ್ ಈಗ ನೀಡಿರುವ ಆದೇಶವನ್ನು ತಡೆಯಿರಿ ಎಂದು ಕೇಂದ್ರ ಸರ್ಕಾರಕ್ಕೆ ಸಚಿವ MB ಪಾಟೀಲ್ ಮನವಿ ಮಾಡಿದ್ದಾರೆ. ರಾಜ್ಯ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ನಮಗೆ ಕುಡಿಯುವ ನೀರಿಗೆ ಬರ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವರು, ಸಂಸದರು ಮಾಜಿ ಸಿಎಂಗಳಾದ BSY ಮತ್ತು ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಕಾವೇರಿ ವಿವಾದ: ರಾಜ್ಯದ ಬಳಿ ಏನಿದೆ ಅಸ್ತ್ರ?

* ಸುಪ್ರೀಂ ಕೋರ್ಟ್‌ಗೆ ಆದೇಶ ಪುನರ್‌ಪರಿಶೀಲಿಸುವಂತೆ

ಅರ್ಜಿ ಸಲ್ಲಿಸಬಹುದು

* ಕಾವೇರಿ ಕೊಳ್ಳದ ರಾಜ್ಯಗಳು ಮಾತುಕತೆ ನಡೆಸಬೇಕು * ಕಾವೇರಿ ಪ್ರಾಧಿಕಾರದ ಮುಂದೆ ಎರಡು ರಾಜ್ಯದ ಸಿಎಂಗಳು ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಬಹುದು * ಕೇಂದ್ರ ಸರ್ಕಾರ ಮಾಡಬಹುದು ರಾಜ್ಯಗಳ ನಡುವೆ ಮಧ್ಯಸ್ಥಿಕೆ

* ಕಾವೇರಿ ಪ್ರಾಧಿಕಾರವೇ ಸುಪ್ರೀಂ ಕೋರ್ಟ್‌ಗೆ ಮಳೆ ಕೊರತೆ ಹಾಗೂ ಬರದ ಬಗ್ಗೆ ಮಾಹಿತಿ ನೀಡಿ ರಾಜ್ಯದ ವಾದಕ್ಕೆ ನೈತಿಕ ಬೆಂಬಲ ಕೊಡಬಹುದು

 

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!